ಐಎಂಎ ವಂಚನೆ ಪ್ರಕರಣ: ಶಿವಾಜಿನಗರ ಶಾಸಕ ರೋಷನ್ ಬೇಗ್ ಅರೆಸ್ಟ್!
ನ್ಯೂಸ್ಕನ್ನಡ ವರದಿ: ಸಾವಿರಾರು ಕೋಟಿ ವಂಚನೆ ಆರೋಪ ಹೊಂದಿರುವ ಐಎಂಎ ಸಂಸ್ಥೆಯ ಜೊತೆ ನಿಕಟ ಸಂಬಂಧ, ವ್ಯವಹಾರ ಹೊಂದಿರುವ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡವು ಇದೀಗ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರನ್ನು ಬಂಧಿಸಿದೆ.
ಐಎಂಎ ಮಾಲಿಕ ಮನ್ಸೂರ್ ಖಾನ್ ಮಾಡಿದ್ದ 400ಕೋಟಿ ಪಡೆದಿದ್ದರು ಎಂಬ ಆರೋಪದ ಮೇಲೆ ವಿಚಾರಣೆಗಾಗಿ ಎಸ್ಐಟಿ ರೋಷನ್ ಬೇಗ್ ಅವರನ್ನು ಕರೆದಿತ್ತು. ಆದರೆ ಇಂದು ಸಂಜೆ ಮುಂಬೈಗೆ ಹಾರಲು ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಎಸ್ಐಟಿ ತಂಡ ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ.