ವರ್ಲ್ಡ್ ಕಪ್ ಟೀಮ್ ನಲ್ಲಿ ವಿರಾಟ್’ಗೆ ಇಲ್ಲ ಸ್ಥಾನ! ಸ್ಥಾನ ಪಡೆದ ಭಾರತದ ಆಟಗಾರರು ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ: ಐಸಿಸಿ ವಿಶ್ವಕಪ್ 12ನೇ ಆವೃತ್ತಿಗೆ ತೆರೆಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಮೊದಲ ಬಾರಿ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಈ ಬಾರಿಯ ವರ್ಲ್ಡ್​ಕಪ್​ ತಂಡವನ್ನು ಪ್ರಕಟಿಸಿದೆ. ಹನ್ನೊಂದು ಆಟಗಾರರ ತಂಡದಲ್ಲಿ ಟೀಂ ಇಂಡಿಯಾದ ರೋಹಿತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ಕೂಡ ಸ್ಥಾನ ಪಡೆದಿದ್ದಾರೆ. ಭಾರತೀಯ ತಂಡದ ನಾಯಕ ವಿರಾಟ್ ಕೋಹ್ಲಿ ಸ್ಥಾನ ವಂಚಿತರಾಗಿದ್ದಾರೆ .

ಈ ವರ್ಲ್ಡ್​ಕಪ್ ಟೀಮ್​ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ 4 ಆಟಗಾರರು ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇನ್ನು ರನ್ನರ್ ಅಪ್ ನ್ಯೂಜಿಲೆಂಡ್, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿಂದ ತಲಾ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಈ ಡ್ರೀಮ್ ಟೀಮ್​ನಲ್ಲಿ ಸ್ಥಾನ ಪಡೆದಿರುವುದು ಬಾಂಗ್ಲಾದೇಶದ ಆಲ್​ರೌಂಡರ್ ಶಕೀಬ್ ಅಲ್ ಹಸನ್.

ಐಸಿಸಿ ವರ್ಲ್ಡ್​ಕಪ್​ ಇಲೆವೆನ್:
ರೋಹಿತ್‌ ಶರ್ಮ (ಭಾರತ)- 648 ರನ್‌
ಜೇಸನ್‌ ರಾಯ್‌ (ಇಂಗ್ಲೆಂಡ್‌)- 443 ರನ್‌
ಕೇನ್ ವಿಲಿಯಮ್ಸನ್‌ (ನಾಯಕ, ನ್ಯೂಜಿಲ್ಯಾಂಡ್‌)- 578 ರನ್‌
ಜೋ ರೂಟ್‌ (ಇಂಗ್ಲೆಂಡ್‌)- 556 ರನ್‌
ಶಕಿಬ್‌ ಅಲ್‌ ಹಸನ್‌ (ಆಲ್​ರೌಂಡರ್- ಬಾಂಗ್ಲಾದೇಶ), 606 ರನ್‌ + 11 ವಿಕೆಟ್‌
ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌)- 465 ರನ್‌
ಅಲೆಕ್ಸ್‌ ಕ್ಯಾರಿ (ವಿಕೆಟ್ ಕೀಪರ್- ಆಸ್ಟ್ರೇಲಿಯಾ)- 375 ರನ್‌, 20 ಕ್ಯಾಚ್‌
ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯ)- 27 ವಿಕೆಟ್‌
ಜೋಫ್ರಾ ಆರ್ಚರ್‌ (ಇಂಗ್ಲೆಂಡ್‌)- 20 ವಿಕೆಟ್‌
ಲೂಕಿ ಫೆರ್ಗುಸನ್ (ನ್ಯೂಜಿಲ್ಯಾಂಡ್‌)- 21 ವಿಕೆಟ್‌
ಜಸ್‌ಪ್ರೀತ್‌ ಬುಮ್ರಾ (ಭಾರತ)- 18 ವಿಕೆಟ್‌

Leave a Reply

Your email address will not be published. Required fields are marked *