ಬಂದೇ ಬಿಟ್ಟಿತು ಸುಪ್ರೀಂಕೋರ್ಟ್ ತೀರ್ಪು, ಅತೃಪ್ತರ ಭವಿಷ್ಯ ಸ್ಪೀಕರ್ ಕೈಯಲ್ಲಿ! ಓದಿ ಕಂಪ್ಲೀಟ್ ಡೀಟೇಲ್ಸ್

ನ್ಯೂಸ್ ಕನ್ನಡ ವರದಿ: ನಾಳೆ ವಿಶ್ವಸಮತ ಇದೆ ಆದರೆ ಅತೃಪ್ತ ಶಾಸಕರು ಬರಲೆಬೇಕು ಎಂದು ಒತ್ತಾಯಿಸುವಂತಿಲ್ಲ. ಅವರು ಬರೊದು, ಬರದೆ ಇರೊದು ಅವರ ಚಿಂತನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ಆದೇಶ.

ಸ್ಪೀಕರ್ ಕಾಲಮಿತಿಯಲ್ಲಿ ರಾಜಿನಾಮೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಸ್ಪೀಕರ್ ಗೆ ಒತ್ತಡ ತರುವಂತಿಲ್ಲ ಅವರ ನಿರ್ಧಾರ ಮಾಡಿದಮೇಲೆ ಕೋರ್ಟ್ ಪರಿಶೀಲಿಸಲಿದೆ. ಹಾಗಾಗಿ ಅತೃಪ್ತ ಶಾಸಕರ ಅನರ್ಹತೆ ಮಾಡುವ ಸಂಪೂರ್ಣ ಅಧಿಕಾರ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿದೆ.

ಅತೃಪ್ತ ಶಾಸಕರಿಗೆ ವಿಫ್ ಅನ್ವಯ ಆಗುವುದಿಲ್ಲ ವಿಶ್ವಾಸ ಮತಯಾಚನೆಗೆ ಬಂದಿಲ್ಲ ಎಂಬ ಕಾರಣಕ್ಕೆ ಅವರನ್ನು ಅನರ್ಹತೆ ಮಾಡುವಾಗಿಲ್ಲ ಎಂದ ಸುಪ್ರೀಂಕೋರ್ಟ್.

ಅತೃಪ್ತ ಶಾಸಕರಿಗೆ ಬಿಗ್ ರಿಲೀಫ್, ಆದರೂ ಸ್ಪೀಕರ್ ಗೂ ತೀರ್ಮಾನ ಮಾಡಲು ಸ್ವತಂತ್ರ ನೀಡಿದ ಸುಪ್ರೀಂಕೋರ್ಟ್.

ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್ ನಾನು ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ ಹಾಗೂ ತಲೆಬಾಗಿಸಿ ಗೌರವಿಸಿ ಪಾಲಿಸುತ್ತೇನೆ ಎಂದಿದ್ದಾರೆ. ಇದೀಗ ಶಾಸಕರ ಭವಿಷ್ಯ ಸ್ಪೀಕರ್ ಕೈಯಲ್ಲಿದೆ.

Leave a Reply

Your email address will not be published. Required fields are marked *