ಸುಪ್ರೀಂಕೋರ್ಟ್ ಇಂದಿನ ತೀರ್ಪಿನ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ನ್ಯಾಯಾಲಯವು ನ್ಯಾಯ ನೀಡುತ್ತೆ, ಸತ್ಯದ ದಾರಿ ತೋರಿಸುತ್ತೆ ಎಂಬುವುದನ್ನು ಇಂದಿನ ಸುಪ್ರೀಂಕೋರ್ಟ್ ಆದೇಶ ಮತ್ತೊಮ್ಮೆ ಎತ್ತಿಹಿಡಿದಿದೆ ಎಂದು ಕಾಂಗ್ರೆಸ್ ನಾಯಕ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನ್ಯಾಯಾಲಯದ ಅಂಗಳದಿಂದ ಸರಿಯಾದ ತೀರ್ಪು ಬಂದಿದೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಇರುವ ಅಧಿಕಾರವನ್ನು ಎತ್ತಿಹಿಡಿದಿದೆ. ಸ್ಪೀಕರ್ ಅವರಿಗಿರುವ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಹೋದ ಶಾಸಕರಿಗೆ ಹಿನ್ನಡೆಯಾಗಿದೆ. ಮತ್ತು ಸ್ಪೀಕರ್ ರಮೇಶ್ ಕುಮಾರ್ ಅವರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಡಿಕೆಶಿ ಹೇಳಿದರು.

ಅತೃಪ್ತ ಶಾಸಕರು ನಮಗೆ ರೆಬೆಲ್ ಅಲ್ಲ, ಅವರೆಲ್ಲಾ ನನ್ನ ಸ್ನೇಹಿತರು, ಮುಂಬೈನಲ್ಲಿ ಇರುವ ಶಾಸಕರ ಬಳಿ ನನಗಂತೂ ಯಾರೂ ಹೋಗಲು ಬಿಡಲ್ಲ, ಹೋದಾಗ ವಾಪಾಸು ವಿಮಾನ ನಿಲ್ದಾಣಕ್ಕೆ ಎತ್ತಿಕೊಂಡು ಬಂದು ವಾಪಾಸ್ ಕಳುಹಿಸಿದ್ದಾರೆ, ಹಾಗಾಗಿ ಈ ಮಾಧ್ಯಮಗಳ ಮೂಲಕವೇ ಮನವಿ ಮಾಡುತ್ತೇನೆ, ಬಿಜೆಪಿ ನಿಮ್ಮನ್ನು ಬಣ್ಣದ ಮಾತಿನಿಂದ ಯಾಮಾರಿಸುತ್ತಿದೆ, ಅವರು ಹಣಿದ ಬಲೆಗೆ ಬಿದ್ದು ಭವಿಷ್ಯ ಹಾಳುಮಾಡಬೇಡಿ, ನಿಮ್ಮ ಮೇಲೆ ಮಂಗನಟೋಪಿ ಹಾಕುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.

Leave a Reply

Your email address will not be published. Required fields are marked *