ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸಮತ ಪಡೆಯಲಿದೆ! : ಸಚಿವ ಯುಟಿ ಖಾದರ್
ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸುಭಧ್ರವಾಗಿದೆ. ನಮಗೆ ಬಹುಮತ ಇದೆ ಎಂದು ಸಚಿವ ಯು ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿ ರಚನೆಯಾದ ಸರಕಾರ, ಅದರ ನೀತಿ ನಿಯಮಗಳ ಪ್ರಕಾರ ನಡೆಯುತ್ತಿದೆ. ವಿರುದ್ಧವಾಗಿ ನಡೆದುಕೊಂಡವರ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ರಾಜ್ಯದ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚಿಸಲು ಸ್ಪೀಕರ್ ಅವರ ಅನುಮತಿ ಕೇಳಿದ್ದಾರೆ. ಆ ಪ್ರಕಾರ ಸ್ಪೀಕರ್ ಅನುಮತಿ ನೀಡಿದ್ದಾರೆ. ಅದರಂತೆ ಗುರುವಾರ ವಿಶ್ವಾಸ ಮತದ ಮೇಲೆ ಚರ್ಚೆ ಆರಂಭವಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ನಂತರ ಕಾಂಗ್ರೆಸ್ ನಾಯಕರು ಅಜ್ಞಾತ ಸ್ಥಳದಲ್ಲಿ ಸೇರಿ ತಮ್ಮ ಅಂತಿಮ ಘಟ್ಟದ ರಾಜಕೀಯ ನಡೆಯ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದು, ಯಾವ ರೀತಿಯ ರಣತಂತ್ರ ನಡೆಸಿ ಸರ್ಕಾರವನ್ನು ಉಳಿಸಲು ಯತ್ನಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.