ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ನಂತರ ಸಿಎಂ ಕುಮಾರಸ್ವಾಮಿ ಮುಂದಿರುವ ಆಯ್ಕೆಗಳೇನು?

ನ್ಯೂಸ್ ಕನ್ನಡ ವರದಿ: ಸುಪ್ರೀಂಕೋರ್ಟ್ ತೀರ್ಪಿನ ನಂತರ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮುಂದಿರುವ ಆಯ್ಕೆಗಳೇನು..?

ಮೊದಲನೆಯದಾಗಿ ನಾಳೆ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಈ ವೇಳೆ ಬಹುಮತ ಸಿಗದಿದ್ದರೆ ವಿದಾಯ ಭಾಷಣ ಮಾಡಿ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ಸಲ್ಲಿಸಿ ಸರ್ಕಾರ ವಿಸರ್ಜಿಸಬಹುದು.

ಎರಡನೇ ಆಯ್ಕೆ: ಇಂದಿನ ಸುಪ್ರೀಂಕೋರ್ಟ್ ತೀರ್ಪಿನ ನಂತರ ಪ್ರಸ್ತುತ ಎಲ್ಲ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಹೀಗಾಗಿ ಬಹುಮತವಿದೆ ಎಂದು ಘೋಷಿಸಿ ಇನ್ನೂ ಸಮಯ ಪಡೆಯಲು ಯತ್ನಿಸಬಹುದು.

ಸರಕಾರ ಉಳಿಸುವ ಕೊನೆಯ ಕ್ಷಣದ ಪ್ರಯತ್ನ ನಡೆಸಿ ಅನರ್ಹತೆ ತೂಗುಗತ್ತಿ ಹಿನ್ನೆಲೆಯಲ್ಲಿ ಕೆಲ ಶಾಸಕರು ವಾಪಸ್ ಬಂದರೆ ಸರಕಾರ ಉಳಿಸಿಕೊಳ್ಳಲು ಅವರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಸರಕಾರ ಉಳಿಸುವ ಪ್ರಯತ್ನ ನಡೆಸಬಹುದು.

ಯಡಿಯುರಪ್ಪನವರು ಹೊಂದಿರುವ ಸಣ್ಣ ಭಯ ಎಂದರೆ ಮೈತ್ರಿ ನಾಯಕರು ರಿವರ್ಸ್ ಆಪರೇಷನ್ ನಡೆಸುವ ಯತ್ನ ಮಾಡಬಹುದು. ಬಿಜೆಪಿಯ ಕೆಲ ಶಾಸಕರನ್ನು ಸೆಳೆಯುವ ಮೂಲಕ ಅವರನ್ನು ವಿಶ್ವಾಸಮತ ಯಾಚನೆ ವೇಳೆ ಗೈರು ಹಾಜರಿ ಮಾಡಿ ಬಹುಮತ ಸಾಬೀತುಪಡಿಸಿ ನಾಟಕೀಯ ತಿರುವು ನೀಡಿ ಸರಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು.

ಇಂದಿನ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಯಾವುದೇ ರೀತಿಯ ತಡೆ ನೀಡದೆ, ಪ್ರಶ್ನಿಸದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಇದನ್ನೇ ದಾಳವಾಗಿ ಉಪಯೋಗಿಸಿ ಸ್ಪೀಕರ್ ಅವರನ್ನು ಬಳಸಿಕೊಂಡು ಕೆಲವರ ಅನರ್ಹತೆ ಮಾಡಿ, ಇನ್ನೂ ಕೆಲವರಿಗೆ ವಿನಾಯಿತಿ ನೀಡಿ ಸರಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯಬಹುದು.

ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚಿಸಲು ನಿರ್ಧರಿಸಿದ್ದೆ. ಈಗ ವಿಪ್‌ಗೆ ಅವಕಾಶ ಇಲ್ಲದ ಕಾರಣ ವಿಶ್ವಾಸಮತ ಯಾಚನೆಯನ್ನು ಮುಂದೂಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿ ಸರ್ಕಾರ ಉಳಿಸಲು ಪ್ರಯತ್ನಿಸಬಹುದು.

Leave a Reply

Your email address will not be published. Required fields are marked *