ಸ್ಯಾರಿ ಟ್ವೀಟರ್‌ಗೆ ಕೈಜೋಡಿಸಿದ ಪ್ರಿಯಾಂಕಾ

ನ್ಯೂಸ್ ಕನ್ನಡ ವರದಿ: ಸಾಮಾಜಿಕ ಜಾಲತಾಣದ ಸ್ಯಾರಿ ಟ್ವೀಟರ್ ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕೈಜೋಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಫೋಟೋವನ್ನು ಟ್ವಿಟ್ ಮಾಡಿದ್ದಾರೆ. ಮದುವೆ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ.

ಸೀರೆಯುಟ್ಟ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ ಗಾಂಧಿ, ನನ್ನ ಮದುವೆ ದಿನ (22 ವರ್ಷಗಳ ಹಿಂದೆ) ಬೆಳಗಿನ ಪೂಜೆ ವೇಳೆ ಎಂದು ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಪ್ರಿಯಾಂಕಾ ಗಾಂಧಿ ಈ ಫೋಟೋದಲ್ಲಿ ತುಂಬ ಸುಂದರವಾಗಿ ಕಾಣ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಈ ಫೋಟೋಕ್ಕೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಾಗೆ ಕಮೆಂಟ್ ಗಳು ಬರ್ತಿವೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸ್ಯಾರಿ ಟ್ವೀಟರ್ ಹ್ಯಾಶ್ಟ್ಯಾಗ್ ಪ್ರಸಿದ್ಧಿ ಪಡೆದಿದ್ದು, ಎಲ್ಲ ನಾರಿಯರು ತಮ್ಮ ಸೀರೆ ಫೋಟೋವನ್ನು ಹಂಚಿಕೊಳ್ತಿದ್ದಾರೆ.

Leave a Reply

Your email address will not be published. Required fields are marked *