ಮೂವರು ಅತೃಪ್ತ ಶಾಸಕರ ಅನರ್ಹತೆ ಪಕ್ಕಾ! ಯಾರು ಆ ಮೂವರು ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳು ಪ್ರತಿ ಕ್ಷಣ ಹೊಸ ತಿರುವು ಪಡೆಯುತ್ತಿದೆ. ಇಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ನಂತರ ಪ್ರತಿಯೊಂದು ಪಕ್ಷವೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದು ನಾಳೆ ಸದನದಲ್ಲಿ ನಡೆಯುವ ಘಟನೆ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ.
ಇದೀಗ ನಾಳಿನ ವಿಧಾನಸಭಾ ಕಲಾಪಕ್ಕೂ ಮುಂಚೆ ಶಾಸಕರ ಅನರ್ಹತೆಯ ಬಗ್ಗೆ ಮುಂದಿನ ಹೆಜ್ಜೆ ಇಟ್ಟಿರುವ ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಇವರನ್ನು ಫೆಬ್ರುವರಿ ಯಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಮೇಲೆ ಅನರ್ಹ ಗೊಳಿಸಬೇಕು ಎಂದೂ, ಅದೇ ರೀತಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಆರ್ ಶಂಕರ್ ಅವರನ್ನೂ ಅನರ್ಹ ಗೊಳಿಸಲು ಕಾಂಗ್ರೆಸ್ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಕೇಳಿಕೊಂಡಿದೆ.
ಈ ಮೂಲಕ ಮೂವರು ಅತೃಪ್ತರ ಅನರ್ಹತೆ ಪಕ್ಕಾ ಆಗಲಿದೆ ಎನ್ನುಲಾಗಿದೆ. ಉಳಿದವರ ಬಗ್ಗೆ ಕಾಂಗ್ರೆಸ್ ಯಾವ ರೀತಿ ಸ್ಪೀಕರ್ ಜೊತೆ ಮನವಿ ಮಾಡಲಿದೆ, ವಿಪ್ ಜಾರಿಮಾಡಲಿದೆಯಾ ಎಂದು ಕುತೂಹಲ ಕೆರಳಿಸಿದೆ.