ಹಿಂದುರಾಷ್ಟ್ರ ಸ್ಥಾಪನೆಯ ಕಾರ್ಯಕ್ರಮ ಆಯೋಜಿಸಿದವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲು SDPI ಆಗ್ರಹ
ನ್ಯೂಸ್ ಕನ್ನಡ ವರದಿ: ದೇಶಾದ್ಯಂತ ಹಲವಾರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಮತ್ತು ವಿಚಾರವಾದಿಗಳ ಹತ್ಯೆಯಲ್ಲಿ ಬಾಗಿಯಾಗಿರುವ ಸನಾತನ ಸಂಸ್ಥೆಯ ಹೆಸರಿನಲ್ಲಿ ಗುರುಪೂರ್ಣ ಮಹೋತ್ಸವದ ಅಂಗವಾಗಿ ಹಿಂದು ರಾಷ್ಟ್ರ ಸ್ಥಾಪನೆಯ ಭಾಗವಾಗಿ ಮಂಗಳೂರಿನ ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಅಯೋಜಿಸಿದಂತಹ ಕಾರ್ಯಕ್ರಮ ಸಂವಿಧಾನಕ್ಕೆ ವಿರುದ್ಧವಾದ ಮತ್ತು ದೇಶಕ್ಕೆ ಮಾರಕವಾದಂತಹ ಕಾರ್ಯಕ್ರಮವಾಗಿರುತ್ತದೆ ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಭಾರತ ದೇಶ ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯ ಇರುವಂತಹ ಮತ್ತು ಎಲ್ಲಾ ಧರ್ಮ ಜಾತಿ ಪಂಗಡದ ಆಚಾರ ವಿಚಾರ ಒಳಗೊಂಡಂತಹ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿರುತ್ತದೆ.ಈ ದೇಶದಲ್ಲಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದಂತಹ ರಾಷ್ಟ್ರವನ್ನು ರಚಿಸಲು ಈ ದೇಶದ ಪ್ರಜಾಪ್ರಭುತ್ವ,ಮತ್ತು ಸಂವಿಧಾನ ಅವಕಾಶ ಕಲ್ಪಿಸುವುದಿಲ್ಲ.ಇದೆಲ್ಲವು ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಮತ್ತು ಜಾತ್ಯಾತೀತ ವ್ಯವಸ್ಥೆಗೆ ವಿರುದ್ದವಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನು ಹಿಂದು ರಾಷ್ಟ್ರ ಮಾಡಬೇಕೆಂಬ ಉದ್ದೇಶದಿಂದ ನಡೆಸಿದ ಕಾರ್ಯಕ್ರಮವಾಗಿರುತ್ತದೆ. ಆದ್ದರಿಂದ ಪೋಲೀಸ್ ಇಲಾಖೆ ಜಿಲ್ಲಾಡಳಿತ ಕೂಡಲೇ ಈ ಕಾರ್ಯಕ್ರಮ ಆಯೋಜಿಸಿದವರ ಮೇಲೆ ಮತ್ತು ಈ ಕಾರ್ಯಕ್ರಮ ಆಯೋಜಿಸಲು ಸ್ಥಳವಾಕಾಶ ಮಾಡಿಕೊಟ್ಟ ಎಸ್.ಡಿ.ಎಂ. ಲಾ ಕಾಲೇಜ್ ನ ಆಡಳಿತ ಮಂಡಳಿಯ ವಿರುದ್ಧ ದೇಶ ದ್ರೋಹದ ಪ್ರಕರಣದಡಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.
ಇದು ಮಂಗಳೂರಿನಲ್ಲಿ ಮೊದಲ ಬಾರಿಯಲ್ಲ ಕಳೆದ ಹಲವು ತಿಂಗಳ ಹಿಂದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹಿಂದು ರಾಷ್ಟ ಸ್ಥಾಪನೆಯ ಕಾರ್ಯಕ್ರಮದ ಭಿತ್ತಿಪತ್ರ ಅಂಟಿಸಿದ್ದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನಿಯೋಗ ಪೋಲೀಸ್ ಇಲಾಖೆಯನ್ನು ಮತ್ತು ಜಿಲ್ಲಾಡಳಿತವನ್ನು ಭೇಟಿಯಾಗಿ ಸನಾತನ ಸಂಸ್ಥೆಯ ದೇಶ ವಿರೋಧಿ ಕಾರ್ಯಕ್ರಮದ ಬಗ್ಗೆ ಗಮನ ಸೆಳೆದಿತ್ತು. ಆದರೆ ಜಿಲ್ಲಾಡಳಿತದ ನಿರ್ಲಕ್ಷ್ಯ ತನವೇ ಈ ರೀತಿಯ ಕಾರ್ಯಕ್ರಮ ನಡೆಸಲು ಅವಕಾಶ ಸಿಕ್ಕಿರುವುದು.
ಅದಲ್ಲದೆ ದೇಶ ಮತ್ತು ರಾಜ್ಯದಲ್ಲಿ ನಡೆದ ವಿಚಾರವಾದಿಗಳ ಹತ್ಯೆ ನಡೆಸಿದ ಸನಾತನ ಸಂಸ್ಥೆಯ ಕಾರ್ಯಕರ್ತರು ಶಸ್ತ್ರಾಸ್ತ್ರ ತರಬೇತಿಯನ್ನು ಪಡೆದದ್ದು ಕೂಡ ದ.ಕ ಜಿಲ್ಲೆಯಲ್ಲಿ ಎಂಬುದ ತನಿಖೆಯಿಂದ ಬಹಿರಂಗ ಗೊಳ್ಳುತ್ತಿರುವಾಗ ಇಂತಹ ದೇಶ ವಿರೋಧಿ ಸಂಘಟನೆಗಳಿಗೆ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ ? ಎಂಬುದು ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ ಇದರ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕಾಗಿದೆ.
ಆದ್ದರಿಂದ ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ದೇಶ ವಿರೋಧಿ ಕಾರ್ಯಕ್ರಮ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರಗಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳಿಗೆ ಆಸ್ಪದ ನೀಡಬಾರದೆಂದು ಎಸ್ ಡಿ ಪಿ ಒತ್ತಾಯಿಸುತ್ತಿದೆ.