ಚಿಕನ್ ಮತ್ತು ಮೊಟ್ಟೆ ‘ಸಸ್ಯಾಹಾರ’ ಎಂದು ಪರಿಗಣಿಸಿ ಎಂದು ಒತ್ತಾಯಿಸಿದ ಶಿವಸೇನೆ ಸಂಸದ!: ನೆಟ್ಟಿಗರಿಂದ ಟ್ರೋಲ್.

ನ್ಯೂಸ್ ಕನ್ನಡ ವರದಿ: ಕೋಳಿ ಮಾಂಸ, ಮೊಟ್ಟೆಯನ್ನು ಸಸ್ಯಾಹಾರ ಆಗಿ ಪರಿಗಣಿಸಬೇಕು ಎಂದು ರಾಜ್ಯಸಭಾ ಸಂಸದ, ಶಿವಸೇನೆ ನೇತಾರ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

ಮಂಗಳವಾರ ಮೇಲ್ಮನೆ ಕಲಾಪದಲ್ಲಿ ಆಯುರ್ವೇದದ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸಂಜಯ್ ರಾವತ್ ಈ ಬೇಡಿಕೆಯೊಡ್ಡಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಸಚಿವಾಲಯ (ಆಯುಷ್), ಚಿಕನ್ ಸಸ್ಯಾಹಾರವೋ ಮಾಂಸಾಹಾರವೋ ಎಂಬುದರ ಬಗ್ಗೆ ತೀರ್ಮಾನಿಸಬೇಕು ಎಂದಿದ್ದಾರೆ.
ಒಂದು ಬಾರಿ ನಾನು ನಂದರ್‌ಬಾರ್‌ನ ಸಣ್ಣ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಆದಿವಾಸಿಗಳು ನನಗೆ ಊಟ ನೀಡಿದರು. ಇದೇನು ಎಂದು ನಾನು ಕೇಳಿದಾಗ ಇದು ಆಯುರ್ವೇದಿಕ್ ಚಿಕನ್, ಇದನ್ನು ತಿಂದರೆ ಎಲ್ಲ ರೋಗಗಳು ಮಾಯವಾಗುತ್ತವೆ. ಕೋಳಿಯನ್ನು ನಾವು ಆ ರೀತಿ ಬೆಳೆಸಿದ್ದೇವೆ ಎಂದು ಅವರು ವಿವರಿಸಿರುವುದಾಗಿ ಸಂಜಯ್ ಹೇಳಿದ್ದಾರೆ.

ಆಯುರ್ವೇದಿಕ್ ಆಹಾರ ನೀಡಿದರೆ ಕೋಳಿಯೂ ಆಯುರ್ವೇದಿಕ್ ಮೊಟ್ಟೆಯನ್ನಿಡುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ ಎಂದ ಸಂಜಯ್ ರಾವತ್, ಇಂತಾ ಕೋಳಿಗಳು ಪ್ರೋಟೀನ್‌ಭರಿತವಾಗಿದ್ದರಿಂದ ಸಸ್ಯಾಹಾರಿಗಳೂ ಸೇವಿಸಬಹುದು ಎಂದಿದ್ದಾರೆ.

ನೆಟ್ಟಿಗರಿಂದ ಬಾರಿ ಟೀಕೆ;

 

 

Leave a Reply

Your email address will not be published. Required fields are marked *