ರಾತ್ರೋರಾತ್ರಿ ಶ್ರೀಮಂತ್ ಪಾಟೀಲರನ್ನು ಮುಂಬೈಗೆ ಒಯ್ದ ಬಿಜೆಪಿ ನಾಯಕ ಯಾರು ಗೊತ್ತೇ?

ರಾತ್ರೋರಾತ್ರಿ ಹೋಟೆಲ್ ನಿಂದ ಎಸ್ಕೇಪ್ ಆಗಿದ್ದ ಶ್ರೀಮಂತ ಪಾಟೀಲ್ ಅವರನ್ನು ಲಕ್ಷ್ಮಣ್ ಸವದಿ ಅವರು ಏರ್ಪೋರ್ಟ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವ ಪೋಟೋಗಳನ್ನು ಸದನದಲ್ಲಿ ತೋರಿಸಿಸ ಮೈತ್ರಿ ನಾಯಕರು, ಸ್ಪೀಕರ್ ಮುಂದೆ ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದಾರೆ. ಡೌನ್ ಡೌನ್ ಬಿಜೆಪಿ, ಬಿಜೆಪಿಗೆ ಧಿಕ್ಕಾರ ಅನ್ನುವ ಮೂಲಕ ಇದಕ್ಕೆ ಉತ್ತರಿಸುವಂತೆ ಸದನದಲ್ಲಿ ಪ್ರತಿಭಟಿಸಿದ್ದಾರೆ.

ಇಂದು ವಿಧಾನಮಂಡಲದ ಮಧ್ಯಾಹ್ನದ ಸದನ ಆರಂಭವಾಗುತ್ತಿದ್ದಂತೆ, ರಾಜ್ಯಪಾಲರ ಸಂದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನ ಹೆಚ್ ಕೆ ಪಾಟೀಲ್ ಇದು ಸರಿಯಲ್ಲ. ಅವರು ಗೌರವಯುತವಾಗಿ ನಡೆದುಕೊಳ್ಳುವಂತೆ ಕೈ ಮುಗಿದು ಬೇಡಿಕೊಂಡರು.

ಈ ಮಧ್ಯೆ ಅಡ್ವಕೇಟ್ ಜನರಲ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಲು ತೆರಳುತ್ತಿದ್ದಂತೆ, ಉಪಸಭಾಪತಿಯವರು ಕಲಾಪವನ್ನು ಮುಂದುವರೆಸಿದರು.

ಈ ವೇಳೆ ನಿನ್ನೆ ರಾತ್ರೋ ರಾತ್ರಿ ಕಾಣೆಯಾಗಿರುವ ಶ್ರೀಮಂತ ಪಾಟೀಲ್ ಅವರು ಏರ್ಪೋರ್ಟ್ ಮೂಲಕ ತೆರಳುತ್ತಿರುವಾಗ ಲಕ್ಷ್ಮಣ್ ಸವದಿಯವರು ಭೇಟಿಯಾಗಿ ಕರೆದುಕೊಂಡು ಹೋಗುತ್ತಿರುವ ಪೋಟೋ ಉಪಸಭಾಪತಿಗೆ ತೋರಿಸಿದ ಪ್ರೀಯಾಂಕ್ ಖರ್ಗೆ, ಇದಕ್ಕೆ ಏನ್ ಉತ್ತರಿಸ್ತೀರಿ ಎಂದು ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದರು.

ಸದನದ ಭಾವಿಗೆ ಇಳಿದ ಕಾಂಗ್ರೆಸ್ ನಾಯಕರು, ಶಾಸಕರನ್ನು ಕಿಡ್ನಾಪ್ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿ, ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಎದ್ದ ಕಾರಣ, ಉಪಸಭಾಪತಿಗಳು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

Leave a Reply

Your email address will not be published. Required fields are marked *