ಬೀಸೊ ದೊಣ್ಣೆಯಿಂದ ಬಚಾವ್ ಆದ ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಮತ್ತೊಂದು ಸಂಕಟ!
ನ್ಯೂಸ್ ಕನ್ನಡ ವರದಿ: ಶುಕ್ರವಾರ ಮಧ್ಯಾಹ್ನ 1:30 ರ ಒಳಗೆ ಮಹುಮತ ಸಾಬೀತುಪಡಿಸಲೇಬೇಕೆಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಾಜುಬಾಯ್ ವಾಲಾ ಅವರು ನಿರ್ದೇಶನ ನೀಡಿದ್ದಾರೆ.
ರಾಜ್ಯಪಾಲರು ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸಂದೇಶ ಕಳಿಸಿದ್ದಾರೆಂದು ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಇಂದೇ ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರ ಪ್ರಕರಣದಲ್ಲಿ ನೀಡಿದ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕರ ವಿಪ್ ಜಾರಿಗೊಳಿಸುವ ಹಕ್ಕನ್ನು ಕಸಿದಂತಾಗಿದೆ.
ಈ ಬಗ್ಗೆ ಸ್ಪಷ್ಟೀಕರಣ ಸಿಗುವವರೆಗೂ ವಿಶ್ವಾಸ ಮತ ಯಾಚಿಸುವುದಿಲ್ಲ ಎಂದು ಮೈತ್ರಿ ಸರ್ಕಾರದ ನಾಯಕರು ಬೆಳಗ್ಗಿನಿಂದ ಸಂಜೆಯವರೆಗೂ ಸದನದಲ್ಲಿ ಸಮಯ ತಳ್ಳುತ್ತ ಬಂದರು. ನಂತರ ಸಂಜೆಯಾಗುತ್ತಲೇ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿ, ಮುಂಬೈಯ ಆಸ್ಪತ್ರೆಯಲ್ಲಿರಿಸಿದೆ ಎಂದು ದೂರಿ, ಗದ್ದಲ ಎಬ್ಬಿಸಿ, ಸದನ ನಾಳೆಗೆ ಮುಂದೂಡುವಂಥ ಸನ್ನಿವೇಶ ಸೃಷ್ಟಿಸಿದರು.
ಇದೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ವಿಶ್ವಾಸಮತಯಾಚನೆಗೆ ತಡೆಯಾಜ್ಞೆಗೆ ಸುಪ್ರೀಂಕೋರ್ಟ್ಗೆ ಅರ್ಜಿಯಾಕುವ ಚರ್ಚೆ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ ಎಂದು ಮೂಲಗಳು ತಿಳಿಸುತ್ತವೆ..
ಏನೇ ಇರಲಿ ನಾಳೆ ಸಂಜೆಯೊಳಗೆ ಕರ್ನಾಟಕ ರಾಜಕೀಯ ಬಿಕಟ್ಟಿನ ಸ್ಪಷ್ಟ ಚಿತ್ರಣ ಸಿಗುತ್ತದೆ.