ಸಿನಿಮೀಯ ಶೈಲಿಯಲ್ಲಿ ಐಎಂಎ ಮಾಲಕ ಮನ್ಸೂರ್ ಅಲಿ ಖಾನ್ ಬಂಧನ! ಕಂಪ್ಲೀಟ್ ಡೀಟೇಲ್ಸ್ ಓದಿ..

ನ್ಯೂಸ್ ಕನ್ನಡ ವರದಿ: ರಾಜ್ಯಾದ್ಯಂತ ಸದ್ದುಮಾಡಿದ್ದ ಐಎಂಎ ಸಾವಿರಾರು ಕೋಟಿ ವಂಚನೆ ಪ್ರಕರಣದ ರೂವಾರಿ, ಅದರ ಮಾಲಕ ಮನ್ಸೂರ್ ಅಲಿ ಖಾನ್ ನನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಐಎಂಎ ಪ್ರಕರಣ ಬೆಳಕಿಗೆ ಬಂದಕೂಡಲೇ ದುಬೈಗೆ ಹಾರಿದ್ದ ಮನ್ಸೂರ್ ಅಲಿ ಖಾನ್ ಇದೀಗ ದುಬೈನಿಂದ ವಾಪಾಸು ಬರಲು ಯತ್ನಿಸಿದಾಗ ವಿಮಾನ ನಿಲ್ದಾಣದಲ್ಲೇ ಐಡಿ ಅಧಿಕಾರಗಳು ಬಂಧಿಸಿ ವಿಚಾರಣೆಗಾಗಿ ವಶಪಡಿಸಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ನಾನು 24 ರಿಂದ 48ಗಂಟೆಯೊಳಗೆ ಭಾರತಕ್ಕೆ ಬರಲಿದ್ದೇನೆ, ನನಗೆ ಪೊಲೀಸರಿಂದ ರಕ್ಷಣೆ ಸಿಗಲಿದೆಯೇ? ನಾನು ವಂಚನೆ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆಗೆ ಸಹಕರಿಸಲು ಸಿದ್ಧ ಎಂದು ವೀಡಿಯೋ ಮೂಲಕ ಮಾಹಿತಿ ನೀಡಿದ್ದ. ಈ ವೀಡಿಯೋ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣದಲ್ಲಿ ಐಡಿ ಅಧಿಕಾರಗಳು ಹದ್ದಿನ ಕಣ್ಣಿಟ್ಟು ಕಾದಿದ್ದು, ದೆಹಲಿಯಲ್ಲಿ ನಿನ್ನೆ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಬಲ್ಲ ಮೂಲದ ಪ್ರಕಾರ ಮನ್ಸೂರ್ ಅಲಿ ಖಾನ್ ಪತ್ನಿ, ಮಕ್ಕಳು ಇಲ್ಲೇ ಭಾರತದಲ್ಲಿದ್ದು ಅವರ ಜೀವಕ್ಕೆ ಅಪಾಯವಿದೆ ಎಂದು ಆತಂಕ ಮನ್ಸೂರ್ ಅಲಿ ಖಾನ್ ಮನದಲ್ಲಿ ಮನೆಮಾಡಿತ್ತು, ಅದೇ ಕಾರಣದಿಂದ ಅವನು ವಾಪಾಸು ಭಾರತಕ್ಕೆ ಬರಲೂ ಕಾರಣವಾಯಿತು.

ಐಎಂಎ ವಂಚನೆ ಪ್ರಕರಣದಲ್ಲಿ ಪೋಲಿಸ್ ಅಧಿಕಾರಿ, ಜಿಲ್ಲಾಧಿಕಾರಿಗಳೇ ಕೋಟಿಗಟ್ಟಲೆ ಲಂಚ ಸ್ವೀಕರಿಸಿ ಇದೀಗ ಎಸ್ಐಟಿ ವಶದಲ್ಲಿದ್ದಾರೆ, ಇದೀಗ ಇದೆಲ್ಲದರ ಸೂತ್ರಧಾರಿಯಾದ ಮನ್ಸೂರ್ ಅಲಿ ಖಾನ್ ಸ್ವತಃ ಬಂಧನವಾಗಿದ್ದು ಹಲವಾರು ಅಧಿಕಾರಿಗಳು, ರಾಜಕಾರಣಿಗಳು, ಮಾಧ್ಯಮದವರೂ ಮನ್ಸೂರ್ ಅಲಿ ಖಾನ್ ನಿಂದ ಲಂಚ ಪಡೆದವರ ನಿದ್ದೆಗೆಡಿಸಿದ್ದು ಸುಳ್ಳಳ್ಳ.

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದಾಜ್ಲೆ ಸಂಸತ್ತಿನಲ್ಲಿ ರಾಜ್ಯದ ಮೈತ್ರಿ ಸರ್ಕಾರದತ್ತ ಬೆರಳು ತೋರಿಸಿ ತೀವ್ರ ಆರೋಪ ಮಾಡಿದ್ದರು, ಮನ್ಸೂರ್ ಅಲಿ ಖಾನ್ ಪರಾರಿಯಾಗಲೂ ಪರೋಕ್ಷವಾಗಿ ಸರಕಾರವೇ ಕಾರಣ ಎಂಬಂತೆ ಮಾತನಾಡಿದ್ದರು, ಇದೀಗ ಮನ್ಸೂರ್ ಬಂಧನದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Leave a Reply

Your email address will not be published. Required fields are marked *