ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ಬೆಂಗಳೂರಿಗರನ್ನು ನೋಡಿ ಕಲಿಯಬೇಕು!: ರಾಹುಲ್

ನ್ಯೂಸ್ ಕನ್ನಡ ವರದಿ: ಈ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಾಶೀರ್ವಾದ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಪ್ರೀತಿ, ವಿಶ್ವಾಸ, ಸಮನ್ವಯತೆಯಿಂದ ಬದುಕುವುದನ್ನು ಬೆಂಗಳೂರಿಗರನ್ನು ನೋಡಿ ಕಲಿಯಬೇಕು ಎಂದು ಹೇಳಿದರು.

ಪ್ರೀತಿ, ವಿಶ್ವಾಸ, ಸಮನ್ವಯತೆಯಿಂದ ಬದುಕುವುದನ್ನು ಬೆಂಗಳೂರಿಗರನ್ನು ನೋಡಿ ಕಲಿಯಬೇಕು. ಬೆಂಗಳೂರಿಗರು ಯಾರಿಂದಲೂ ಏನನ್ನು ಕೇಳುವುದಿಲ್ಲ. ಎಲ್ಲರೂ ಬುದ್ಧಿವಂತರು. ಆದ್ದರಿಂದ, ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದ ಅವರು ದೇಶದ ಪ್ರತಿಯೊಬ್ಬರ ಜನರನ್ನು ಗೌರವಿಸುವ ಕಾಂಗ್ರೆಸ್ ಪಕ್ಷ, ಜನರ ಹಿತ ಮರೆತು ಉದ್ಯಮಿಗಳಿಗೆ ಸಹಾಯ ಮಾಡುವ ಬಿಜೆಪಿಯ ಸಿದ್ಧಾಂತಗಳ ನಡುವೆ ಈ ಬಾರಿಯ ಚುನಾವಣೆ ನಡೆಯಲಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.

ಮಾತು ಮುಂದುವರಿಸಿದ ರಾಹುಲ್ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಿರೋಧ ಪಕ್ಷಗಳನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಹೋಲಿಕೆ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ಯಾವತ್ತೂ ಸಹ ವಿಪಕ್ಷಗಳ ವಿರುದ್ಧ ಇಂತಹ ಭಾಷೆಯನ್ನು ಬಳಸುವುದಿಲ್ಲ. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಎಚ್‌ಎಎಲ್‌ ಹೆಲಿಕಾಪ್ಟರ್ ಖರೀದಿ ಒಪ್ಪಂದ ಏಕೆ ರದ್ದಾಯಿತು. ನೀರವ್ ಮೋದಿ ಮಾಡಿದ್ದೇನು?, ಅಮಿತ್ ಶಾ ಪುತ್ರನ ಕಂಪನಿ ಅಷ್ಟು ಹಣ ಗಳಿಸಿದ್ದು ಹೇಗೆ? ಎಂದು ಮಾತನಾಡಲಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *