ವಿಶ್ವಾಸಮತ ಯಾಚನೆ ಕುರಿತು ಯಡಿಯುರಪ್ಪಗೆ ಸ್ಪೀಕರ್ ನೀಡಿದ ಖಡಕ್ ಉತ್ತರವೇನು ಗೊತ್ತೇ?

ವಿಶ್ವಾಸಮತ ಯಾಚನೆಯನ್ನು ವ್ಯವಸ್ಥಿತವಾಗಿ ಮುಂದೂಡಲು ಯಶಸ್ವಿಯಾಗಿರುವ ಆಡಳಿತ ಪಕ್ಷದ ಸದಸ್ಯರು ಶುಕ್ರವಾರವಾದರೂ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುತ್ತಾರೆ ಎಂಬುದಿತ್ತು.

ಇಂದೇ ವಿಶ್ವಾಸಮತಯಾಚನೆ ಮಾಡಬೇಕೆಂದು ಆದೇಶ ಕೊಟ್ಟಿರುವ ರಾಜ್ಯಪಾಲರ ಆದೇಶಕ್ಕೆ ದೋಸ್ತಿಗಳು ಡೋಂಟ್‍ ಕೇರ್ ಎಂದಿದ್ದಾರೆ. ಮಧ್ಯಾಹ್ನ 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ.

ಈ ವೇಳೆ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿ ಮಾಡಿದರು.

ಯಡಿಯೂರಪ್ಪ ಮನವಿಗೆ ಸ್ಪೀಕರ್, ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ಬಳಿಕ ಮತಕ್ಕೆ ಹಾಕಲಾಗುವುದು ಎಂದು ತಿಳಿಸಿದರು.

ಚರ್ಚೆ ಮುಗಿಯುವ ತನಕ ವಿಶ್ವಾಸ ಮತಕ್ಕೆ ಹಾಕುವುದಿಲ್ಲ. ನಿಮಗೆ ಆತುರವಿರಬಹುದು. ನನಗಿಲ್ಲ ಎಂದು ಸ್ಪೀಕರ್ ಯಡಿಯೂರಪ್ಪರಿಗೆ ಚಾಟಿ ಬೀಸಿದರು. ವಿಶ್ವಾಸ ಮತ ಹಾಕುವುದಕ್ಕೆ ಒಂದು ಪ್ರಕ್ರಿಯೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸಷ್ಟನೆ ನೀಡಿದರು.

Leave a Reply

Your email address will not be published. Required fields are marked *