ಬಿಜೆಪಿಗರೇ,ಅತೃಪ್ತರನ್ನು ಇಟ್ಟುಕೊಂಡು ಸರ್ಕಾರ ರಚಿಸಿ ನೋಡಿ, ಮುಂದೆ ಇದೆ ನಿಮಗೆ!: ಸಿಎಂ ಎಚ್ಚರಿಕೆ
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ರೂಪುಗೊಂಡ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲ ನಡೆಸಿ ಕೆಡವಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರೇ, ಮುಂಬೈಯಲ್ಲಿರುವ ಅತೃಪ್ತ ಶಾಸಕರನ್ನು ಸೇರಿಸಿಯೇ ಸರಕಾರ ರಚಿಸಿ. ಆಟೋ ರೀತಿ ವಿಮಾನವನ್ನು ಬೆಂಗಳೂರಿನಿಂದ ಮುಂಬೈಗೆ, ಪುಣೆಗೆ ಓಡಾಡಿಸಿದ್ದೀರಿ. ಮುಂದೆ ನಿಮಗೆ ಕಾದಿದೆ’’ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಬಿಜೆಪಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸದನದಲ್ಲಿ ಈಗಾಗಲೇ ಶೆಡ್ಯೂಲ್10-ರ ಬಗ್ಗೆ ನಿನ್ನೆ ಪ್ರಸ್ತಾವ ಆಗಿದೆ. ಇಲ್ಲಿ ಎಲ್ಲವೂ ವಿಸ್ತ್ರತ ಚರ್ಚೆ ಆಗಬೇಕು. ಬಿಜೆಪಿಯವರಿಗೆ ಆತುರವಿದೆ. ವಾಜಪೇಯಿ ವಿಶ್ವಾಸ ಮತ ಮಂಡಿಸುವಾಗ 10 ದಿನ ಕಲಾಪ ನಡೆದಿಲ್ಲವೇ? ಚರ್ಚೆ ನಡೆಯದೆ ವಿಶ್ವಾಸಮತ ಸಾಬೀತುಪಡಿಸುವುದು ಸರಿಯಲ್ಲ. ಇನ್ನೂ ಎರಡು ಮೂರು ದಿನ ಏನಾಗುತ್ತದೋ, ನೋಡೋಣ ಎಂದು ವಿಶ್ವಾಸಮತ ಚರ್ಚೆಯ ಮೇಲೆ ಮಾತನಾಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.