ಬಿಜೆಪಿಗೆ ನಿಮ್ಮದೇ ಆಪರೇಷನ್ ತಿರುಗುಬಾಣವಾಗಲಿದೆ!: ಶಿವಲಿಂಗೇಗೌಡರ ಮಾತಿನ ಪುಲ್ ಡೀಟೇಲ್ಸ್

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳು ರಾಜ್ಯದ ಜನತೆಗೆ ಜಿಗುಪ್ಸೆ ಮೂಡಿಸಿದೆ, ಬಿಜೆಪಿ ನಡೆಸಿರುವ ಆಪರೇಷನ್ ಕಮಲದ ಮೂಲಕ 15 ಶಾಸಕರನ್ನು ಕರೆದುಕೊಂಡು ಹೋಗಿ ಕೂಡಿಟ್ಟಿದ್ದೀರಿ. ಅವರಿಗೆ ಮಂತ್ರಿಗಿರಿ ಕೊಟ್ಟು, ಇನ್ನೊಂದು ಮತ್ತೊಂದು ಕೊಟ್ಟು ಸರಕಾರ ರಚಿಸುವ ಕನಸು ಕಾಣುತ್ತಿದ್ದೀರಲ್ವಾ, ನಿಮ್ಮ ಈ ನಡೆಯೇ ನಿಮಗೆ ತಿರುಗುಬಾಣವಾಗಲಿದೆ ನೋಡ್ತಾ ಇರಿ ಎಂದು ಶಾಸಕ ಶಿವಲಿಂಗೇಗೌಡರು ಹೇಳಿದರು.

ನೀವು ಆಪರೇಷನ್ ನಡೆಸಿ ಆಚೆ ಕರೆದವರು ಕೆಲವೇ ದಿನಗಳಲ್ಲಿ ರಿವರ್ಸ್ ಆಪರೇಷನ್ ಆದರೂ ಅಚ್ಚರಿ ಇಲ್ಲ. ಆಚೆಯಿಂದ ಈಚೆ ಈಚೆಯಿಂದ ಆಚೆ ಹೋಗುತ್ತಾ ಇದ್ದರೆ ರಾಜ್ಯದ ಜನರು ಹೇಗೆ ಸಹಿಸಿಕೊಳ್ಳಬಹುದು. ಇದಕ್ಕೇ ಜನರು ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾ? ಎಂದು ಪ್ರಶ್ನಿಸಿದರು.

2008ರಲ್ಲಿ ಬಿಜೆಪಿ ನಡೆಸಿರುವ ಎಲ್ಲಾ ರಾಜಕೀಯ ನಾಟಕಗಳನ್ನು ನಾವೂ ನೋಡಿದ್ದೇವೆ, ಸ್ಪೀಕರ್ ಬೋಪಯ್ಯ ಬಿಜೆಪಿ ಪರವಾಗಿ ತೆಗೆದುಕೊಂಡ ನಿರ್ಧಾರ ನಾವು ನೋಡಿದ್ದೇವೆ. ಆದರೆ ಇಂದು ನಿಸ್ಪಕ್ಷಪಾತ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸಂಸದೆ ಶೋಭಾ ಕರಂದಾಜ್ಲೆ ಮಾತನಾಡುತ್ತಾರೆ. ಸ್ಪೀಕರ್ ಅವರನ್ನು ಕಾಂಗ್ರೆಸ್ ಏಜೆಂಟ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *