ಅನಾರೋಗ್ಯದ ಭರ್ಜರಿ ನಾಟಕವಾಡುತ್ತಿದ್ದಾರೆ ಶ್ರೀಮಂತ್ ಪಾಟೀಲ್? ಇಲ್ಲಿದೆ ಫುಲ್ ಡೀಟೇಲ್ಸ್
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆಕ್ಷಣಕ್ಷಣಕ್ಕೂ ಹೊಸ ತಿರುವು ಕಂಡುಬರುತ್ತಿದೆ. ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕರ ಬಲೆಗೆ ಬಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ನಾಟಕ ಇದೀಗ ಬಯಲಾಗಿದೆ.
ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್ ನಿಂದ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ನಾಪತ್ತೆಯಾದ ಶ್ರೀಮಂತ್ ಪಾಟೀಲ್ ದೂರದ ಮುಂಬೈನಲ್ಲಿರುವ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಸಮಸ್ಯೆಯ ಕಾರಣ, ಹೃದಯ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂಬಂತೆ ಕೆಲವು ಚಿತ್ರಗಳು ಮಾಧ್ಯಮಗಳಿಗೆ ದೊರಕಿತ್ತು.
ಆದರೆ ಶ್ರೀಮಂತ ಪಾಟೀಲ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಸದನದಲ್ಲಿ ಸ್ಪೀಕರ್ ಅವರಿಗೆ ದೂರನ್ನು ನೀಡಿದಾಗ ಗಂಭೀರವಾಗಿ ಪರಿಗಣಿಸಿದ ಸ್ಪೀಕರ್ ಈ ಕುರಿತು ಗೃಹಸಚಿವ ಎಂ ಬಿ ಪಾಟೀಲ್ ಅವರಿಗೆ ತನಿಖೆ ನಡೆಸಿ ವರದಿ ನೀಡಿ ಎಂದಿದ್ದರು. ಆದರೆ ಕರ್ನಾಟಕ ಗೃಹ ಸಚಿವರು ಅಧಿಕೃತವಾಗಿ ಕಳುಹಿಸಿದ ಪೊಲೀಸ್ ಅಧಿಕಾರಿಯನ್ನು ಮಹಾರಾಷ್ಟ್ರ ಪೊಲೀಸರು ಸೈಂಟ್ ಜಾರ್ಜ್ ಆಸ್ಪತ್ರೆಯ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಇದು ಬಹಳಷ್ಟು ಸಂಶಯಕ್ಕೆ ಎಡೆಮಾಡಿದೆ.
ಅದೇ ರೀತಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಆಸ್ಪತ್ರೆ ಪ್ರವೇಶಿಸಿ ನಮ್ಮ ಕಾಂಗ್ರೆಸ್ ಶಾಸಕರ ಆರೋಗ್ಯ ವಿಚಾರಣೆ ನಡೆಸಬೇಕಾಗಿದೆ, ಭೇಟಿಯಾಗಬೇಕಾಗಿದೆ ಎಂದಾಗಲೂ ಅವರನ್ನು ತಡೆಹಿಡಿಯಲಾಗಿದ್ದು, ಆಸ್ಪತ್ರೆಯ ICUನಲ್ಲಿ ಶ್ರೀಮಂತ ಪಾಟೀಲ್ ದಾಖಲಾಗಿಯೇ ಇಲ್ಲವೆನ್ನಲಾಗಿದೆ.
ಅವರಿಗೆ ಯಾವುದೇ ತುರ್ತು ನಿಗಮದಲ್ಲಿಡುವಂತಹ ಅನಾರೋಗ್ಯದ ಸಮಸ್ಯೆ ಇಲ್ಲ, ಅವರಿಗೆ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆಯೂ ನೀಡಲಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ನನಗೆ ತಿಳಿಸಿದ್ದಾರೆ, ಹಾಗಾಗಿ ನನ್ನನ್ನು ಒಳಗೆ ಬಿಡಿ, ನಾನೇ ಖುದ್ದಾಗಿ ಭೇಟಿಯಾಗಿ ಆರೋಗ್ಯ ವಿಚಾರಣೆ ಹಾಗೂ ಮಾಹಿತಿ ಪಡೆಯುವೆ ಎಂದು ಯಶೋಮತಿ ಎಷ್ಟೇ ವಾಗ್ವಾದ ನಡೆಸಿದರೂ ಪೊಲೀಸರು ಅನುಮತಿ ನೀಡದೆ ಜನರ ಹಾಗೂ ಕರ್ನಾಟಕ ಪೋಲಿಸ್ ತಂಡದ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.