ಪಂಜಾಬ್ ತಂಡದಲ್ಲಿ ಕನ್ನಡಿಗರ ಘರ್ಜನೆ: ಮೊದಲ ಜಯ ಗಳಿಸಿದ ಕಿಂಗ್ಸ್ ಇಲೆವೆನ್!
ನ್ಯೂಸ್ ಕನ್ನಡ ವರದಿ-(08.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ ಎರಡನೇ ಪಂದ್ಯಾಟವು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ನಡೆಯಿತು. ಕನ್ನಡಿಗರಾದ ಕೆ.ಎಲ್ ರಾಹುಲ್(51) ಮತ್ತು ಕರುಣ್ ನಾಯರ್(50) ಸಿಡಿಸಿದ ಭರ್ಜರಿ ಅರ್ಧಶತಕದ ಕಾರಣದಿಂದ ಕಿಂಗ್ಸ್ ಇಲೆವೆನ್ ಪಂಕಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಆರು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಮೊದಲು ಬ್ಯಾಟಿಂಗ್ ನಡೆಸಿದ್ದು, ನಾಯಕ ಗೌತಮ್ ಗಂಭೀರ್ ಅತ್ಯುತ್ತಮ ಪ್ರದರ್ಶನ ನೀಡಿ, 42 ಎಸೆತಗಳಿಗೆ 55 ರನ್ ಗಳಿಸಿ ಮಿಂಚಿದರು. ರಿಷಭ್ ಪಂತ್ ಮತ್ತು ಕ್ರಿಸ್ ಮೋರಿಸ್ ಕೂಡಾ ಗಮನಾರ್ಹ ಪ್ರದರ್ಶನ ನೀಡಿದರು. ದೆಹಲಿ ತಂಡ ನೀಡಿದ 197 ರನ್ ಗಳನ್ನು ಬೆನ್ನತ್ತಿದ ಪಂಜಾಬ್ ತಂಡದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಪ್ರದರ್ಶನ ಪ್ರಾರಂಭಿಸಿದರು. ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಕೊನೆಗೂ ನಾಲ್ಕು ವಿಕೆಟ್ ಗಳ ನಷ್ಟದಲ್ಲಿ ಪಂಜಾಬ್ ತಂಡವು ಗುರಿ ಸೇರಿತು. ಪಂಜಾಬ್ ಪರ ಮುಜೀಬ್ ರಹ್ಮಾನ್ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದರು.