ಜೆಡಿಎಸ್ ಶಾಸಕ ಸತ್ಯನಾರಾಯಣರಿಗೆ ಬಿಜೆಪಿಗೆ ಬರಲು ಜಗದೀಶ್ ಶೆಟ್ಟರ್ ನೀಡಿದ ಆಫರ್ ಏನು ಗೊತ್ತೇ?

ನ್ಯೂಸ್ ಕನ್ನಡ ವರದಿ: ನನಗೂ ಬಿಜೆಪಿ ಆಮಿಷ: ಕುದುರೆ ವ್ಯಾಪಾರ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ. ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಜಗದೀಶ್‌ ಶೆಟ್ಟರ್ ಅವರು ಕರೆ ಮಾಡಿ ಬಿಜೆಪಿಗೆ ಆಹ್ವಾನಿಸಿದ್ದರು. ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಪಕ್ಷ ಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದೆ’ ಎಂದು ಶಾಸಕ ಬಿ.ಸತ್ಯನಾರಾಯಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯನಾರಾಯಣ ರವರು, ‘ಶೆಟ್ಟರ್ ಅವರು ನನಗೆ ದೂರವಾಣಿ ಕರೆ ಮಾಡಿ ನೀವು ಹಿರಿಯ ನಾಯಕರು. ಜೆಡಿಎಸ್ ಪಕ್ಷದಲ್ಲಿ ನಿಮಗೆ ಅನ್ಯಾಯ ಮಾಡಿದೆ. ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿಗೆ ಬನ್ನಿ. ಗೌರವಯುತವಾಗಿ ನಡೆಸಿಕೊಂಡು ಮಂತ್ರಿ ಸ್ಥಾನವು ನೀಡುತ್ತೇವೆ. ಅಲ್ಲದೇ, ಚುನಾವಣೆಗೆ ನಿಮಗೆ ಅಥವಾ ನಿಮ್ಮ ಮಗನಿಗೆ ಟಿಕೆಟ್ ನೀಡಿ ಎಲ್ಲಾ ಖರ್ಚು ಭರಿಸುತ್ತೇವೆ ಎಂದು ಆಮಿಷ ತೋರಿಸಿದ್ದರು’ ಎಂದರು.

Leave a Reply

Your email address will not be published. Required fields are marked *