ನನಗೂ ಸಿಎಂ ಆಫರ್ ಬಂದಿದ್ದು ನಿಜ!: ಡಿಕೆಶಿ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಓದಿ..

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಶತಾಯ ಗತಾಯ ಉಳಿಸುವ ಸಲುವಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನ ದೋಸ್ತಿ ನಾಯಕರು ಮಾಡುತ್ತಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ನನಗೂ ಮುಖ್ಯಮಂತ್ರಿ ಯಾಗಲು ಆಹ್ವಾನ ಬಂದಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ನನಗೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಡಿಸಿಎಂ ಪರಮೇಶ್ವರ್ ಅವರಿಗೂ ಮುಖ್ಯಮಂತ್ರಿ ಆಗಲು ಆಹ್ವಾನ ಜೆಡಿಎಸ್ ಕಡೆಯಿಂದ ಬಂದಿದ್ದು, ಸರ್ಕಾರ ಉಳಿಸಲು ಯಾವುದೇ ತ್ಯಾಗಕ್ಕೂ ಸಿದ್ದ ಎನ್ನುವ ಸಂದೇಶವನ್ನು ನಾಯಕರು ನೀಡಿದ್ದಾರೆ. ಈ ಕುರಿತು ಎಲ್ಲಾ ಚರ್ಚೆ ನಾಯಕರು ನಡೆಸುತ್ತಿದ್ದಾರೆ.

ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಶ್ವಾಸ ಮತಯಾಚನೆ ನಡೆಯಲಿದೆ. ಹಾಗೂ ನಾವು ಬಹುಮತ ಸಾಬೀತು ಮಾಡುವ ಸಂಪೂರ್ಣ ವಿಶ್ವಾಸ ಇದೆ. ಅತೃಪ್ತ ಶಾಸಕರು ಬಂದು ನಮ್ಮ ಪರವಾಗಿ ಮತಚಲಾಯಿಸುವ ಮೂಲಕ ಮೈತ್ರಿ ಸರ್ಕಾರ ಮುಂದುವರೆಯಲಿದೆ ಎಂದರು.

Leave a Reply

Your email address will not be published. Required fields are marked *