ಮೂರು ದಿನಗಳಲ್ಲಿ ಯಡಿಯುರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ!: ಜನಾರ್ದನ ರೆಡ್ಡಿ ಭವಿಷ್ಯ

ನ್ಯೂಸ್ ಕನ್ನಡ ವರದಿ:: ಎರಡು ಮೂರು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮ ಒಡೆದವರನ್ನು ಶಿವ ಮೂರನೇ ಕಣ್ಣು ಬಿಟ್ಟು ಭಸ್ಮ ಮಾಡುತ್ತಾನೆಂದು ಹೇಳಿದ್ದೆ. ಅದು ಈಗ ನಿಜವಾಗಿರುವಂತೆ ಹಿಂದಿನ ಸರ್ಕಾರ ಭಸ್ಮ ಆಗಿದೆ. ಅಲ್ಪಸ್ವಲ್ಪ ಉಳಿದಿರುವ ಸರ್ಕಾರ ನಾಳೆ ಅಥವಾ ನಾಡಿದ್ದು ಸಂಪೂರ್ಣ ಭಸ್ಮವಾಗಲಿದೆ. ಇದರ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಬಿಎಸ್. ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದರೆ, ಕೇವಲ ಎಂಟತ್ತು ಸೀಟುಗಳ ಕೊರತೆ ಎದುರಾಯಿತು. ಇನ್ನು ಮೂರು ದಿನಗಳಲ್ಲಿ ಬಿಎಸ್ ವೈ ಸಿಎಂ ಆಗಲಿದ್ದಾರೆ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

Leave a Reply

Your email address will not be published. Required fields are marked *