ನಾನು ಮೈತ್ರಿ ಸರ್ಕಾರವನ್ನು ಬೆಂಬಲಿಸುವುದಿಲ್ಲ! : ಶಾಸಕ ಎನ್. ಮಹೇಶ್

ನ್ಯೂಸ್ ಕನ್ನಡ ವರದಿ:  ಸೋಮವಾರ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಮಂಡಿಸುವ ದಿನ, ಅಂದು ನಡೆಯಲಿರುವ ಮೈತ್ರಿ ಸರ್ಕಾರ ಬಹುಮತ ಸಾಬೀತಿನ ಅಧಿವೇಶನಕ್ಕೆ ಗೈರಾಗುವುದಾಗಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

ಕೊಳ್ಳೇಗಾಲ ಕ್ಷೇತ್ರ ಪ್ರವಾಸ ಕೈಗೊಂಡಿದ್ದ ಬಿಎಸ್ಪಿ ಶಾಸಕ ಎನ್.ಮಹೇಶ್ ಮಾದ್ಯಮದವರೊಂದಿಗೆ “ಬಿಎಸ್ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಬಹುಮತ ಸಾಬೀತಿನ‌ ಅಧಿವೇಶನದಲ್ಲಿ ಭಾಗವಹಿಸದೆ ತಟಸ್ಥವಾಗಿರುವಂತೆ ಸೂಚನೆ ನೀಡಿದ್ದರಿಂದ ಅಧಿವೇಶನಕ್ಕೆ ಬಾರದೆ ದೂರ ಉಳಿದಿರುವುದಾಗಿ ಸ್ಪಷ್ಟಪಡಿಸಿದರು”.

ಈಗಾಗಲೇ ಅಧಿವೇಶನಕ್ಕೆ ಗೈರಾಗಿದ್ದು, ಈ ಮೊದಲು ಮೈತ್ರಿ ಸರ್ಕಾರದ ಜೊತೆಗಿದ್ದ ಎನ್.ಮಹೇಶ್ ಇದೀಗ ಅವರ ನಿರ್ಧಾರವನ್ನು ಬದಲಾವಣೆ ಮಾಡಿಕೊಂಡರು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ ಇದರಿಯ ಬಹುಮತ ಸಂಖ್ಯೆ ಇಳಿಮುಖವಾಗುತ್ತದೆ.

Leave a Reply

Your email address will not be published. Required fields are marked *