ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿ ಬರಲಿದೆ, ಚಿಂತೆನೇ ಮಾಡ್ಬೇಡಿ!: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ: ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಉಳಿವಿನ ಬಗ್ಗೆ ಕಾರ್ಯತಂತ್ರದ ಬಗ್ಗೆ ಮಾತನಾಡಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ಸಿದ್ದರಾಮಯ್ಯನವರು ವಿಪ್ ಜಾರಿಯ ಕುರಿತು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಬರುವ ಸಾಧ್ಯತೆ ಇದ್ದು, ಅದನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ನಮ್ಮ ಪರವಾಗಿ ತೀರ್ಪು ಕೊಡಲಿದೆ, ನಮಗೆ ವಿಪ್ ಜಾರಿ ಮಾಡುವ ಅಧಿಕಾರ ಸಿಕ್ಕಿದರೆ ಅದರ ಭಯ ತೋರಿಸಿ ಅತೃಪ್ತರಲ್ದಿ ಕೆಲವರನ್ನು ವಾಪಾಸು ಕರೆಸಬಹುದು ಎಂದು ಸಿದ್ದರಾಮಯ್ಯನವರು ಲೆಕ್ಕಾಚಾರ ಹಾಕಿಕೊಂಡಿದ್ದು. ಸರಕಾರ ಉಳಿಸಲು ನಾವು ಯಶಸ್ವಿಯಾಗುತ್ತೇವೆ ಎಂದು ಕಾಂಗ್ರೆಸ್ ಶಾಸಕರ ಧೈರ್ಯ ತುಂಬಿದ್ದಾರೆ.

Leave a Reply

Your email address will not be published. Required fields are marked *