ಮೈತ್ರಿ ಸರ್ಕಾರಕ್ಕೆ ಇಂದು ಜೀವದಾನ ನೀಡಿದ ಸುಪ್ರೀಂಕೋರ್ಟ್ ತೀರ್ಪು! ಮುಂದೆ ಓದಿ

ನ್ಯೂಸ್ ಕನ್ನಡ ವರದಿ: ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದ ಪಕ್ಷೇತರ ಶಾಸಕರಿಗೆ ಹಿನ್ನಡೆಯಾಗಿದೆ. ನಿಮ್ಮ ಅರ್ಜಿಯನ್ನು ಇಂದು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ನಾಳೆಯಾದರೂ ನಮ್ಮ ಅರ್ಜಿಯನ್ನು ಪ್ರಥಮ ಆದ್ಯತೆಯೊಂದಿಗೆ ಪರಿಶೀಲಿಸಿ ಎಂದು ಪಕ್ಷೇತರರ ಪರವಾಗಿ ವಕೀಲರು ಮಾಡಿದ ಮನವಿಗೆ, ವಿಶ್ವಾಸಮತಯಾಚನೆ ವಿಷಯದಲ್ಲಿ ಮಧ್ಯಪ್ರವೇಶಿಸಲು ಆಗಲ್ಲ, ನಾಳೆ ನಿಮ್ಮ ಅರ್ಜಿಯನ್ನು ಯಾವಾಗ ಪರಿಶೀಲಿಸಬೇಕೆಂದು ನಿರ್ಧರಿಸುತ್ತೇವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಈ ಮೂಲಕ ಇಂದಿನ ವಿಶ್ವಾಸಮತ ಯಾಚನೆ ನಾಳೆಯವರೆಗೂ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *