ಸಿ.ಟಿ ರವಿಯ ಬಿರಿಯಾನಿ ಕಥೆಗೆ ಸಿಎಂ ಕುಮಾರಸ್ವಾಮಿ ನೀಡಿದ ವಿವರಣೆ ಏನು ಗೊತ್ತೇ ?

ನ್ಯೂಸ್ ಕನ್ನಡ ವರದಿ : ಬಿಜೆಪಿ ಶಾಸಕರೆಲ್ಲರು ವಿಶ್ವಾಸಮತಯಾಚನೆ ಪ್ರಕ್ರಿಯೆಗಾಗಿ ಕಾದು ಕುಳಿತಿದ್ದಾರೆ. ಆದರೆ ವಿಶ್ವಾಸಮತ ಯಾಚನೆ ಚರ್ಚೆಗೆ ಅವಕಾಶ ಬೇಕಿದೆ ಎಂದು ಆಡಳಿತ ಪಕ್ಷ ಒತ್ತಾಯ ಮಾಡಿದ್ದಾರೆ. ಈ ಚರ್ಚೆ ವೇಳೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿಟಿರವಿ ಐಎಂಎ ಕಂಪನಿ ಬಗ್ಗೆ ಈ ಹಿಂದೆಯೇ ಕಂಪ್ಲೆಂಟ್ ಬಂದಿರುತ್ತದೆ. ಆಗ ತನಿಖೆಯೂ ನಡೆಯುತ್ತದೆ. ಆ ತನಿಖೆಗೆ ಕ್ಲೀನ್ ಚಿಟ್ ಕಳುಹಿಸಿದ್ದಾರೆ. ಆ ಕ್ಲೀನ್ ಚಿಟ್ ಕೊಟ್ಟವನು ಇಂದು ಜೈಲಿನಲ್ಲಿದ್ದಾರೆ. ಆದರೆ ಯಾರ ಬಳಿ ಆಡಳಿತ ಇತ್ತೋ, ಇಂಟಲಿಜೆನ್ಸ್ ಇತ್ತೋ ಅವರೇ ಅವರನ್ನು ಯಾರು ರಕ್ಷಣೆ ಮಾಡಿದ್ದಾರೆ. 46 ಸಾವಿರ ಬಡ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ ಪಾಪದ ಹೊಣೆ ಅವರ ಜೊತೆ ಕೂತು ಬಿರಿಯಾನಿ ತಿಂದವರ ಮೇಲಿದೆ. ಆ ಬಿರಿಯಾನಿ ತಿಂದಿದ್ದು ಯಾರು ಅನ್ನೋದನ್ನು ಅವರು ಬಾಯಿ ಬಿಟ್ಟು ಹೇಳಿದರೆ ರಾಜ್ಯ ಹಾಗೂ ದೇಶಕ್ಕೆ ಗೊತ್ತಾಗುತ್ತದೆ. ಅಂಥವರನ್ನು ತೆಗೆದುಕೊಂಡು ಹೋಗಿ ನೇಣು ಹಾಕಬೇಕು ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಟಿ ರವಿ ಅವರು ಬಿರಿಯಾನಿ ಕಥೆಯನ್ನು ನನಗೆ ಹೇಳಿದ್ದು ಅನ್ನೋದು ಗೊತ್ತು. ಹೊರಗಡೆ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಹಾಗೂ ಆ ಬಿರಿಯಾನಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಓದಿದ್ದೇನೆ. ಐಎಂಎ ಪ್ರಕರಣದ ಇಂದಿನ ಈ ತನಿಖೆಯಲ್ಲಿ ಎಸ್‍ಐಟಿಯನ್ನು ನಾವೇ ರಚನೆ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯಂತ ಉತ್ತಮವಾದ ಕೆಲಸ ಮಾಡಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ. ಇಲ್ಲಿ ಬಿರಿಯಾನಿ ಕಥೆ ಯಾವುದು ನಡೆದಿಲ್ಲ. ಬಡವರ ದುಡ್ಡನ್ನು ನುಂಗಿ ಹಾಕಿದವರಿಗೆ ರಕ್ಷಣೆ ಕೊಡಲು ಈ ಸರ್ಕಾರದಲ್ಲಿ ಸಾಧ್ಯವಿಲ್ಲ. ಈ ಸಂಬಂಧ ಯಾವ ರಾಜಿನೂ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *