ಸಾಮಾಜಿಕ ಜಾಲತಾಣದಲ್ಲಿ ಸಿಎಂ ರಾಜಿನಾಮೆ ಪತ್ರ ವೈರಲ್!: ಹೆಚ್ಡಿಕೆ ಕೊಟ್ಟು ಉತ್ತರ ಏನು ಗೊತ್ತೆ?

ನ್ಯೂಸ್ ಕನ್ನಡ ವರದಿ: ಸೋಷಿಯಲ್ ಮೀಡಿಯಾದಲ್ಲಿ ಸಿಎಂ ರಾಜೀನಾಮೆ ಪತ್ರ ವೈರಲ್ ಆಗಿದ್ದು ,ಈ ಬಗ್ಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಷಷ್ಟನೆ ನೀಡಿದ್ದಾರೆ.

ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ ಎಂಬ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಸಿಎಂ ಕುಮಾರಸ್ವಾಮಿ ಸ್ಷಷ್ಟನೆ ನೀಡಿದ್ದಾರೆ.

ವಿಧಾನಸಭ ಕಲಾಪದಲ್ಲಿ ಫೇಕ್ ಲೆಟರ್ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಈತರಹದ ಕೀಳು ಮಟ್ಟದ ರಾಜಕೀಯ ಮಾಡಲು ಅಸಹ್ಯವಾಗಬೇಕು ನಾನು ರಾಜಿನಾಮೆ ನೀಡಿದ್ದೇನೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹರಡುತ್ತಿದ್ದಾರೆ ಇದನ್ನು ನಾನು ಸಹಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೆಲವರು ನಕಲಿ ಸಹಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ರಾಜೀನಾಮೆ ಪತ್ರ ಫೇಕ್ ಎಂದು ಖುದ್ದು ಸಿಎಂ ಕುಮಾರಸ್ವಾಮಿ ಅವರೆ ಸ್ಪಷ್ಟಪಡಿದರು.

Leave a Reply

Your email address will not be published. Required fields are marked *