ಪ್ರಸ್ತುತ ಹಾಗೂ ಭವಿಷ್ಯದಲ್ಲಿಯೂ ರಾಹುಲ್ ಗಾಂಧಿಯೇ ನಮ್ಮ ನಾಯಕರು!: ಅಶೋಕ್ ಗೆಹ್ಲೋಟ್

ನ್ಯೂಸ್ ಕನ್ನಡ ವರದಿ : ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಹೊಸ ಅಧ್ಯಕ್ಷರನ್ನು ನೇಮಿಸುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ರಾಹುಲ್ ಕಳೆದ ತಿಂಗಳು ತಮ್ಮ ರಾಜೀನಾಮೆ ಪತ್ರವನ್ನು ಬಹಿರಂಗಪಡಿಸಿದ್ದರು. ಈ ಕುರಿತು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಗಹ್ಲೋಟ್‌, ಕಾಂಗ್ರೆಸ್ ಪಕ್ಷವು ಯಾವುದೇ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ. ರಾಹುಲ್ ಗಾಂಧಿ ಇನ್ನೂ ನಮ್ಮ ನಾಯಕರಾಗಿದ್ದಾರೆ, ಭವಿಷ್ಯದಲ್ಲಿಯೂ ನಮ್ಮ ನಾಯಕರಾಗಿಯೇ ಇರುತ್ತಾರೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಾ, ಲೋಕಸಭಾ ಚುನಾವಣೆಗೆ ಹೋರಾಡಲು ಬಿಜೆಪಿ ಸಶಸ್ತ್ರ ಪಡೆಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದರು. “ಯಾರು ಎಷ್ಟೇ ಎತ್ತರಕ್ಕೆ ಸಾಗಿದರೂ, ಮುಂದೊಂದು ದಿನ ಅವರು ಕೆಳಗೆ ಬರಲೇಬೇಕು. ಬಿಜೆಪಿಯಲ್ಲೂ ಇದೇ ಆಗುತ್ತದೆ. ಅವರು ಎತ್ತರವನ್ನು ಸಾಧಿಸಿದ್ದಾರೆ, ಆದರೆ ಈಗ ಅವರು ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸದಿದ್ದರೆ, ಜನರು ಶೀಘ್ರದಲ್ಲೇ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾರೆ” ಎಂದು ಗೆಹ್ಲೋಟ್ ತಿಳಿಸಿದರು.

Leave a Reply

Your email address will not be published. Required fields are marked *