ಬಿಜೆಪಿಗರೇ, ಅತೃಪ್ತರಿಂದ ಬೆನ್ನಿಗೆ ಚೂರಿ ಹಾಕಿಸಿಕೊಳ್ಳಲು ನೀವೂ ರೆಡಿಯಾಗಿ!: ಡಿಕೆಶಿ ವಾರ್ನಿಂಗ್

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲೇಬೇಕೆಂದು ಪಣತೊಟ್ಟು ಆಪರೇಷನ್ ಕಮಲ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಸಚಿವ ಡಿಕೆ ಶಿವಕುಮಾರ್ ಇಂದು ತೀವ್ರ ವಾಗ್ದಾಳಿ ನಡೆಸಿದರು.

ಆ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಶಿವಕುಮಾರ್, ನಮ್ಮನ್ನು ಬಿಟ್ಟು ರಾಜೀನಾಮೆ ಕೊಟ್ಟು ಹೋದವರೆಲ್ಲರೂ ನಮ್ಮ ಪರಿವಾರದ ಸದಸ್ಯರುಗಳೇ, ಅವರನ್ನು ಮರಳಿ ಕರೆತಂದು ಅವರಿಗೆ ಆಗಿರುವ ನೋವಿಗೆ ಪರಿಹಾರ ನೀಡಲು ಬೇಕಾದ ಎಲ್ಲಾ ಪ್ರಯತ್ನ ಮಾಡಿದೆವು.

ಪರಿವಾರದ ಜನರ ನಡುವೆ ಇರುವ ಅಸಮಧಾನ, ನೋವನ್ನು ಕೂತು ಬಗೆಹರಿಸಲು ತಯಾರೇ ಇಲ್ಲದೆ ಬಿಜೆಪಿ ನೀಡಿರುವ ಆಮಿಷಕ್ಕೆ ಬಲಿಯಾಗಿ ಪಕ್ಷವೇ ಬೆಳೆಸಿದ ನಾಯಕರು ಈಗ ಪಕ್ಷಕ್ಕೆ ಮೋಸ ಮಾಡಿ ನಮ್ಮ ಬೆನ್ನಿಗೆ ಚೂರಿ ಹಾಕಿ ನಿಮ್ಮ ಕಡೆ ಹೊರಟಿದ್ದಾರೆ, ಆದರೆ ನೆನಪಿರಲಿ ನಮಗೆ ಮೋಸ ಮಾಡಿ ಚೂರಿ ಹಾಕಿ ಹೋದವರು ನಾಳೆ ನಿಮಗೂ ಹಾಕಬಹುದು, ತಯಾರಾಗಿರಿ ಎಂದು ಡಿಕೆಶಿ ಹೇಳಿದರು.

Leave a Reply

Your email address will not be published. Required fields are marked *