ಡಿಕೆಶಿ ಗರಂ ಆಗಿ ಅತೃಪ್ತರಿಗೆ ಬೀಸಿದ ಚಾಟಿ ಬಿಜೆಪಿಗೆ ತಟ್ಟಿದ್ದು ಹೇಗೆ!? ಮುಂದೆ ಓದಿ..
ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ 15 ಅತೃಪ್ತ ಶಾಸಕರ ಒಂದು ದಿನ ನಿಮಗೂ ಬೆನ್ನಿಗೆ ಚೂರಿಯಾಕುತ್ತಾರೆ ಮರೆಯದಿರಿ ಎಂದ ಸಚಿವ ಡಿ.ಕೆ.ಶಿವಕುಮಾರ್.
ಸದನದಲ್ಲಿ ಮಾತನಾಡಿದ ಡಿಕೆಶಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲೇಬೇಕೆಂದು ಪಣತೊಟ್ಟು ಆಪರೇಷನ್ ಕಮಲ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಎಂದು ತೀವ್ರ ವಾಗ್ದಾಳಿ ನಡೆಸದರು.
ಮುಂಬೈನಲ್ಲಿರುವ ನಮ್ಮ ಶಾಸಕರನ್ನು ನಾನು ಅತೃಪ್ತರು ಎಂದು ಕರೆಯಲ್ಲ, ಅವರು `ಸಂತೃಪ್ತ’ರು ಎಂದು ಡಿಕೆಶಿ ವ್ಯಂಗ್ಯ ಮಾಡಿದ್ದಾರೆ.
ಮಂತ್ರಿ ಸ್ಥಾನದ ಮತ್ತು ಹಣದ ಆಮಿಷ ಆಸೆ ತೋರಿಸಿ ಬಿಜೆಪಿಯವರು 15 ಶಾಸಕರಿಗೆ ಟೋಪಿ ಹಾಕಿ, ನಿಮಗೆ ರಾಜಕೀಯ ಸಮಾಧಿ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ ಡಿಕೆಶಿ.
ರಾಜಕಾರಣದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಒಮ್ಮೆ ನಾವು ಗೆದ್ದರೆ, ಒಮ್ಮೆ ನೀವು ಅಷ್ಟೇ, ನಮಗೆ ಬಂದಿರುವ ಈ ಪರಿಸ್ಥಿತಿ ನಿಮಗೂ ಬರುತ್ತದೆ.
ಬಿಜೆಪಿಗರೇ, ಅತೃಪ್ತರಿಂದ ಬೆನ್ನಿಗೆ ಚೂರಿ ಹಾಕಿಸಿಕೊಳ್ಳಲು ನೀವೂ ರೆಡಿಯಾಗಿ ಎಂದು ಎಚ್ಚರಿಸಿದರು.