ಮುಂಬೈ ರಿನೈಸಾನ್ಸ್ ಹೋಟೆಲ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ!: ಅತೃಪ್ತರು ಕಂಗಾಲು!

ನ್ಯೂಸ್ ಕನ್ನಡ ವರದಿ: ಮುಂಬೈ ರಿನೈಸಾನ್ಸ್ ಹೋಟೆಲ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ: ಅತೃಪ್ತರು ಕಂಗಾಲು

ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರದ ಪರ ವಿಶ್ವಾಸಮತಯಾಚನೆ ಮಾಡದೆ ಹೋಟೆಲ್ ನಲ್ಲೆ ಉಳಿದಿರುವ ೧೫ ಜನ ಅತೃಪ್ತ ಶಾಸಕರ ನಡೆಯನ್ನು ಖಂಡಿಸಿ, ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಹೋಟೆಲ್​ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.ಇಂದು ಮಧ್ಯಾಹ್ನ ಸಾವಿರಾರು ಮಂದಿ ಕಾರ್ಯಕರ್ತರು ಹೋಟೆಲ್​ ಮುಂಭಾಗ ಜಮಾಯಿಸಿ, ಅತೃಪ್ತ ಶಾಸಕರ ವಿರುದ್ಧ ಹಾಗೂ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ​ ವಿರುದ್ಧ ಮತ್ತು ಅತೃಪ್ತ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.

Leave a Reply

Your email address will not be published. Required fields are marked *