ಆಟ ಮುಗಿದಿಲ್ಲ, ಬಹುಮತ ಸಾಬೀತು ಪಡಿಸದಿದ್ದರೆ ಯಡ್ಡಿ ಸಿಎಂ ಹುದ್ದೆ ಖಲಾಸ್!: ಸುದ್ದಿ ಓದಿ
ವಿಶ್ವಾಸಮತಯಾಚನೆ ಮಾಡಿದ ಸಿಎಂ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಬಿಜೆಪಿ ಪರ 105 ಮತಗಳು, ದೋಸ್ತಿಗಳ ಪರ 99 ಮತಗಳು ಬಂದ ಕಾರಣ ಆಡಳಿತ ಸರ್ಕಾರ ಬಹುಮತ ಕಳೆದುಕೊಂಡಿದೆ.
ಅಧಿಕಾರದ ಸಂಖ್ಯೆ ಆಟ ಇನ್ನೂ ಮುಕ್ತಾಯವಾಗಿಲ್ಲ! ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಮತ್ತೊಂದು ದೊಡ್ಡ ಅಗ್ನಿಪರೀಕ್ಷೆ ಪಾಸಾಗಬೇಕಿದೆ!. ವಿಶ್ವಾಸಮತಯಾಚನೆ ದಿನ ಗೈರು ಹಾಜರಾದವರೆಲ್ಲ, ಅವತ್ತೂ ಗೈರು ಹಾಜರಾದರೆ ಮಾತ್ರ ಬಿಎಸ್ವೈ ಪರಿಪೂರ್ಣ ಸಿಎಂ ಆಗಲು ಸಾಧ್ಯ.
ಬಿಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸಬೇಕು. ಬಹುಮತ ಸಾಬೀತು ಪಡಿಸಲು ಅವರಿಗೂ ಮ್ಯಾಜಿಕ್ ನಂಬರ್ ಬೆಂಬಲ ಬೇಕು ಈಗ ವಿಶ್ವಾಸಮತಯಾಚನೆಗೆ ಗೈರು ಹಾಜರಾಗಿರೋ ಅತೃಪ್ತರು ಶಾಸಕರು ಆ ದಿನವೂ ಕೂಡ ಗೈರು ಹಾಜರಾಗಬೇಕು ಕಾರಣ ಸ್ಪೀಕರ್ ಇನ್ನೂ ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡಿಲ್ಲ.
ಬಿಎಸ್.ಯಡಿಯೂರಪ್ಪ ಬಹುಮತ ಸಾಬೀತು ಮಾಡುವ ದಿನ ಅತೃಪ್ತತ ಶಾಸಕರು ಹಾಜರಾದರೆ ಮತ್ತೆ ಯಡಿಯೂರಪ್ಪನಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.