ತಮಗೆ ಅಡ್ಡಬಂದ ಶಾಸಕ ಹರೀಶ್ ಪೂಂಜಾಗೆ ಯಡ್ಡಿ ಮಂಗಳಾರತಿ! ವೀಡಿಯೋ ವೈರಲ್.

ಯಡಿಯೂರಪ್ಪ ಸದನದಲ್ಲಿ ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಆಕ್ರೋಶ. ಯಡ್ಡಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶ್ವಾಸಮತಯಾಚನೆ ಮಾಡಿದ ಸಿಎಂ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಬಿಜೆಪಿ ಪರ 105 ಮತಗಳು, ದೋಸ್ತಿಗಳ ಪರ 99 ಮತಗಳು ಬಂದ ಕಾರಣ ಆಡಳಿತ ಸರ್ಕಾರ ಬಹುಮತ ಕಳೆದುಕೊಂಡು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ.

ವಿಶ್ವಾಸಮತ ಪ್ರಸ್ತಾವನೆ ವಿರುದ್ಧವಾಗಿ ಹೆಚ್ಚು ಮತಗಳು ಬಂದಿದೆ ಎಂದು ಸ್ಪೀಕರ್ ಘೋಷಣೆ ಮಾಡಿದರು. ಗೆಲುವಿನ ಹಿನ್ನೆಲೆ ಅಧಿವೇಶನ ಮುಗಿದ ನಂತರ ಬಿಜೆಪಿ ಸಂಭ್ರಮಿಸಿತ್ತು. ಬಿಎಸ್​​ ಯಡಿಯೂರಪ್ಪ ವಿಕ್ಟರಿ ಚಿಹ್ನೆ ತೋರಿಸಿ ಖುಷಿ ಪಡುತ್ತಿದ್ದರು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್​ ಪೂಂಜ ಯಡಿಯೂರಪ್ಪನವರಿಗೆ ಅಡ್ಡವಾಗಿ ಕಾಣಿಸಿಕೊಂಡಿದ್ದರು. ಆಗ ಬಿಎಸ್​ವೈ ಸಿಟ್ಟಾಗಿ ಹರೀಶ್​ ಪೂಂಜ ಅವರನ್ನು ಬದಿಗೆ ತಳ್ಳಿದ್ದಾರೆ.

https://m.facebook.com/story.php?story_fbid=2349817275274521&id=10000738814228

Leave a Reply

Your email address will not be published. Required fields are marked *