‘ಅತೃಪ್ತರ ರೂವಾರಿ’ ರಮೇಶ್ ಜಾರಕೀಹೊಳಿ ಉಪಮುಖ್ಯಮಂತ್ರಿ ಕನಸು ನುಚ್ಚುನೂರು! ತಪ್ಪದೇ ಓದಿ

ನ್ಯೂಸ್ ಕನ್ನಡ ವರದಿ: ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸೌಧದಲ್ಲಿ ಇಂದು ಸಂಜೆ ಧಿಡೀರ್ ಸುದ್ದಿಗೋಷ್ಟಿ ಕರೆದು ಶಾಸಕರಾದ ಮಹೇಶ್ ಕುಮಟಳ್ಳಿ. ರಮೇಶ್ ಜಾರಕಿಹೊಳಿ. ಆರ್ ಶಂಕರ್ ಈ ಮೂವರನ್ನು ಸುದೀರ್ಘ ಕಾರಣಗಳನ್ನು ನೀಡಿ ಅನರ್ಹಗೊಳಿಸಿದ್ದಾರೆ ರಮೇಶ್ ಕುಮಾರ್.

ಈ ಮೂಲಕ ಅತೃಪ್ತರ ಗುಂಪು ಕಟ್ಟಿಕೊಂಡು ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಪತನದ ರೂವಾರಿಯಾಗಿದ್ದ, ಅದೇ ರೀತಿ ಹೊಸ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಕಾಂಕ್ಷಿಯೂ ಆಗಿದ್ದ ರಮೇಶ್ ಜಾರಕೀಹೊಳಿ ಕನಸು ನುಚ್ಚುನೂರಾಗಿದೆ. 2023ರ ವರೆಗೂ ರಮೇಶ್ ಜಾರಕೀಹೊಳಿ ವಿಧಾನಸಭೆಗೆ ಪ್ರವೇಶಿಸಲು ಅನರ್ಹರಾಗಿದ್ದಾರೆ, ಇದು ಅವರಿಗೆ ಶಾಕ್ ನೀಡಿದೆ.

ಹೀಗಾಗಿ ಯಡಿಯುರಪ್ಪ ನೇತೃತ್ವದಲ್ಲಿ ಹೊಸ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ತಾನು ಉಪಮುಖ್ಯಮಂತ್ರಿ ಆಗಿಯೇ ತೀರುತ್ತೇನೆ ಎಂದ ಮಹದಾಸೆಯೊಂದಿಗೆ ಕಾಂಗ್ರೆಸ್ ನ ಯಾವುದೇ ಸಂಧಾನಕ್ಕೂ ಜಗ್ಗದೇ ಕುಮಾರಸ್ವಾಮಿ ಸರ್ಕಾರ ಕೆಡವಿದ ಅತೃಪ್ತ ಶಾಸಕರ ತಂಡದ ನಾಯಕ ರಮೇಶ್ ಜಾರಕೀಹೊಳಿ ಇತ್ತ ಶಾಸಕ ಸ್ಥಾನವೂ ಇಲ್ಲ ಅತ್ತ ಉಪಮುಖ್ಯಮಂತ್ರಿ ಸ್ಥಾನವೂ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.

Leave a Reply

Your email address will not be published. Required fields are marked *