ಹೌದು, ಅತೃಪ್ತರು ಕರೆ ಮಾಡಿದ್ದು ನಿಜ!: ಸಿದ್ದರಾಮಯ್ಯ ಹೇಳಿದ್ದೇನು? ಓದಿ..
ನ್ಯೂಸ್ ಕನ್ನಡ ವರದಿ: ಇಂದು ಬೆಳಿಗ್ಗೆ ಮಾಜಿ ಗೃಹಸಚಿವ ಎಂ ಬಿ ಪಾಟೀಲ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅತೃಪ್ತ ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂಬ ಹೊಸ ಬಾಂಬ್ ಸಿಡಿಸಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಮಾಡುವ ಸುದ್ದಿ ನೀಡಿದ್ದರು.
ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರು ಕೇಳಿದಾಗ ಹೌದು, ನನಗೆ ಅತೃಪ್ತ ಶಾಸಕರು ಕರೆ ಮಾಡಿರುವುದು ನಿಜ, ನಾನು ಇಲ್ಲ ಎಂದು ಹೇಳಲ್ಲ, ಆದರೆ ನಾನು ಅವರ ಕರೆ ಸ್ವೀಕರಿಸಿಲ್ಲ ಬಹುಶಃ ಅನರ್ಹತೆ ಭೀತಿಯಿಂದ ಅವರು ಕರೆ ಮಾಡಿರಬಹುದು, ಆದರೆ ಅವರನ್ನು ಆಮಿಷ ನೀಡಿ ಮುಂಬೈಗೆ ಕರೆದೊಯ್ದು ಇಲ್ಲಿ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಯಾರು ಕಾರಣ ಎಂಬುದು ನಾವು ಮರೆತಿಲ್ಲ ಎಂದರು.