ಪಂಜಾಬ್ ಗೆಲುವಿಗೆ ಪ್ರಮುಖ ರೂವಾರಿಯಾದ 17ರ ಹರೆಯದ ಮುಜೀಬ್ ರಹ್ಮಾನ್!

ನ್ಯೂಸ್ ಕನ್ನಡ ವರದಿ-(08.04.18): ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಪ್ರಾರಂಭಗೊಂಡಿದೆ. ನಿನ್ನೆ ತಾನೇ ಐಪಿಎಲ್ ಅಧಿಕೃತವಾಗು ಉದ್ಘಾಟನೆಗೊಂಡಿತ್ತು. ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಾಟವು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿತ್ತು. ಇದೀಗ ಇಂದು ನಡೆದ ಎರಡನೇ ಪಂದ್ಯಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿತ್ತು. ಈ ಪಂದ್ಯಾಟದಲ್ಲಿ ಬ್ಯಾಟಿಂಗ್ ಮೂಲಕ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಮಿಂಚಿದರೆ ಬೌಲಿಂಗ್ ನಲ್ಲಿ ಅಫ್ಘಾನಿಸ್ತಾನದ ಕಿರಿಯ ಬೌಲರ್ ಮುಜೀಬ್ ರಹ್ಮಾನ್ ಮಿಂಚಿದ್ದಾರೆ.

ಅಫ್ಘಾನಿಸ್ತಾನ ತಂಡದ ಆಟಗಾರ 17ರ ಹರೆಯಕ್ಕೆ ಕಾಲಿಡುತ್ತಿರುವ ಮುಜೀಬ್ ರಹ್ಮಾನ್ ಇಂದಿನ ಪಂದ್ಯದಲ್ಲಿ ಬೌಲಿಂಗ್ ಮೂಲಕ ಮಿಂಚಿದ್ದಾರೆ. ಡೆಲ್ಲಿ ತಂಡದ ಪ್ರಮುಖ ಆಟಗಾರರಾದ ಕಾಲಿನ್ ಮುನ್ರೋ ಮತ್ತು ರಿಷಭ್ ಪಂತ್ ರ ವಿಕೆಟ್ ಗಳಿಸಿಕೊಳ್ಳುವಲ್ಲಿ ಮುಜೀಬ್ ಯಶಸ್ವಿಯಾದರು. ಒಟ್ಟು ನಾಲ್ಕು ಓವರ್ ಗಳನ್ನು ಎಸೆದ ಮುಜೀಬ್ ರಹ್ಮಾನ್ ಕೇವಲ 28 ರನ್ ಗಳನ್ನು ನೀಡಿ ಎರಡು ಪ್ರಮುಖ ವಿಕೆಟ್ ಗಳನ್ನು ಗಳಿಸಿದರು.

Leave a Reply

Your email address will not be published. Required fields are marked *