ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್!
ಇಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ ದೂರಿನ ಅನ್ವಯ ಎಲ್ಲಾ ರೀತಿಯಲ್ಲೂ ವಿಚಾರಣೆ ವಿಮರ್ಶೆ ನಡೆಸಿ, ದೇಶದ ಬೇರೆಡೆ ನಡೆದ ಹಲವಾರು ನಿದರ್ಶನಗಳನ್ನು ಆಧರಿಸಿ ಎಲ್ಲಾ 12 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದಾರೆ
ಅತೃಪ್ತ ಶಾಸಕರು 2023 ಮೇ ತಿಂಗಳ ವರೆಗೂ ಅನರ್ಹತೆಗೊಂಡಿದ್ದು, ಯಾವುದೇ ಉಪಚುನಾವಣೆ ಎದುರಿಸುವಂತಿಲ್ಲ