ಅನರ್ಹಗೊಂಡವರನ್ನು ಕೇಳುವವರೇ ಇಲ್ಲ! ಈಗ ಎಲ್ಲಿದ್ದಾರೆ ಗೊತ್ತೇ?

ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಶತಾಯ ಗತಾಯ ಉರುಳಿಸಬೇಕೆಂದು ಆಪರೇಷನ್ ಕಮಲದ ಆಮಿಷಕ್ಕೆ ಒಳಗಾಗಿ
ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್,ಭೈರತಿ ಬಸವರಾಜು, ಮುನಿರತ್ನ, ಎಂಟಿಬಿ ನಾಗರಾಜ್, ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಏನೋ ಸಾಧನೆ ಮಾಡಲು ಹೊಗಿದ್ದಂತೆ ಇದ್ದವರು ಇದೀಗ ಅನರ್ಹಗೊಂಡು ಸೈಲೆಂಟಾಗಿ ವಾಪಾಸು ಬಂದಿದ್ದಾರೆ. ಮಾಧ್ಯಮಗಳ ಕೇಂದ್ರ ಬಿಂದು ಆಗಿದ್ದವರು ಈಗ ಅನರ್ಹರಾಗಿ ಮೂಲೆಗುಂಪು ಆಗಿದ್ದಾರೆ. ಇನ್ನು ಕಾನೂನು ಹೋರಾಟ ತುಂಬಾ ಜಟಿಲವಾದದ್ದು, ಇವರ ಮಂತ್ರಿಯಾಗುವ ಕನಸೆಲ್ಲ ಸದ್ಯಕ್ಕೆ ಕನಸಾಗಿಯೇ ಉಳಿಯಲಿದೆ.

ಕಳೆದ ವಾರ ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ,  ಅಥಣಿಯ ಮಹೇಶ್ ಕುಮಟಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ನಿನ್ನೆ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, – ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್​.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಆರ್​.ಆರ್​. ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟ್​ನ ಕೆ. ಗೋಪಾಲಯ್ಯ, ಕೆ.ಆರ್​. ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ್, ಕಾಗೇವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದಾರೆ. ಅಲ್ಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೈತ್ರಿ ಪಕ್ಷದ ಎಲ್ಲ ಶಾಸಕರನ್ನೂ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸುವ ಮೂಲಕ ಶಾಕ್ ನೀಡಿದ್ದಾರೆ.

Leave a Reply

Your email address will not be published. Required fields are marked *