ಬಿಜೆಪಿ ಪಾಳಯದಲ್ಲಿ ಭಿನ್ನಮತ ಕೂಗು! ಬಹುಮತ ಕಳೆದುಕೊಳ್ಳುತ್ತದೆಯೇ ಯಡ್ಡಿ ಸರ್ಕಾರ!
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ವಾರವೇ ಕಳೆದಿದೆ. ಆದ್ರೆ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ. ಕ್ಯಾಬಿನೆಟ್ ವಿಸ್ತರಣೆಗೆ ಇನ್ನೂ ಒಂದು ವಾರ ಕಾಯಲೇಬೇಕು. ಅಷ್ಟಕ್ಕೂ ಬಿಎಸ್ವೈ ಈ ಬಾರಿ ಸಂಪುಟ ರಚನೆಯಲ್ಲಿ ಅಳೆದು ತೂಗಿ ಮಂತ್ರಿಗಿರಿ ಹಂಚಿಕೆಗೆ ನಿರ್ಧರಿಸಿದ್ದಾರೆ.
ಇತ್ತ, ಮೊದಲ ಸಚಿವ ಸಂಪುಟದಲ್ಲೆ ನಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಬಿಜೆಪಿ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ, ಅತ್ತ ಹಿರಿಯರಿಗೆ ಮಣೆಯಾಕಿ ನಮ್ಮನ್ನು ಕೈ ಬಿಟ್ಟರೆ ನಾವು ಪಕ್ಷವನ್ನೆ ಬಿಡುತ್ತೇವೆ ಎಂದು ಯಡಿಯೂರಪ್ಪನಿಗೆ ಎಚ್ಚರಿಕೆ ರವಾನಿಸಿ ತಾಜ್ ವೆಸ್ಟ್ ಹೋಟೆಲ್ ನಲ್ಲಿ ಎಚ್ಡಿಕೆ ಭೇಟಿಯಾಗಿದ್ದಾರೆ ಜಿಜೆಪಿ ರೆಬೆಲ್ ಶಾಸಕರು.