ಸಿಕ್ಸರ್ ಗಳ ಸುರಿಮಳೆಯೊಂದಿಗೆ ಭರ್ಜರಿ ಪ್ರದರ್ಶನ ತೋರಿದ ಎಬಿಡಿ ವಿಲಿಯರ್ಸ್!
ನ್ಯೂಸ್ ಕನ್ನಡ ವರದಿ-(08.04.18): ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಪ್ರಾರಂಭಗೊಂಡಿದೆ. ನಿನ್ನೆ ತಾನೇ ಐಪಿಎಲ್ ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಾಟವು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿತ್ತು. ಇದೀಗ ಇಂದು ನಡೆದ ಎರಡನೇ ಪಂದ್ಯಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳುರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಆರ್ಸಿಬಿ ಪರ ಎಬಿಡಿ ವಿಲಿಯರ್ಸ್ ಸ್ಫೋಟಕ ಪ್ರದರ್ಶನ ನೀಡಿದ್ದಾರೆ.
ಬೆಂಗಳುರು ತಂಡದ ಪ್ರಮುಖ ಆಟಗಾರನಾಗಿರುವ ಎಬಿಡಿ ವಿಲಿಯರ್ಸ್ ಇಂದು ನಡೆದ ಪಂದ್ಯಾಟದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸ್ಫೋಟಕ ಪ್ರದರ್ಶನ ತೋರಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ವಿಲಿಯರ್ಸ್ 5 ಸಿಕ್ಸರ್ ಗಳನ್ನು ಸಿಡಿಸಿದರು. ಕೇವಲ 23 ಎಸೆತಗಳಲ್ಲಿ 44 ರನ್ ಗಳಿಸಿದ ಎಬಿಡಿ ವಿಲಿಯರ್ಸ್ ತಮ್ಮ ಚಿತ್ರ ವಿಚಿತ್ರ ಶೈಲಿಯ ಬ್ಯಾಟಿಂಗ್ ಮೂಲಕ ಕೋಲ್ಕತ್ತಾ ತಂಡದ ಆಟಗಾರರ ಬೆವರಿಳಿಸಿದರು. ಕೊನೆಗೆ ನಿತೀಶ್ ರಾಣಾ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.