ಐತಿಹಾಸಿಕ ಕುಸಿತ ಕಂಡ ದೇಶದ ಷೇರು ಮಾರುಕಟ್ಟೆ!: ಮೋದಿ ಸರ್ಕಾರ 2.0

ನ್ಯೂಸ್ ಕನ್ನಡ ವರದಿ: ಭಾರತದ ಷೇರು ಮಾರುಕಟ್ಟೆ 2002ರ ಜುಲೈನಿಂದೀಚೆಗೆ ಅತ್ಯಂತ ಕೆಟ್ಟ ಸನ್ನಿವೇಶ ಕಂಡಿದೆ. ನಿಫ್ಟಿ ಶೇ 5.68ರಷ್ಟು ಕುಸಿತ ಕಂಡಿದ್ದರೆ, ಸೆನ್ಸೆಕ್ಸ್ ಶೇ 4.86ರಷ್ಟು ಹಿನ್ನಡೆ ಅನುಭವಿಸಿದೆ. ಕಳೆದ 17 ವರ್ಷಗಳಲ್ಲಿಯೇ ಇದು ಭಾರಿ ದೊಡ್ಡ ಕುಸಿತವಾಗಿದೆ. 2002ರ ಜುಲೈನಲ್ಲಿ ನಿಫ್ಟಿ50 ಶೇ 9.3ರಷ್ಟು ಕುಸಿತ ಕಂಡಿತ್ತು. ಸೆನ್ಸೆಕ್ಸ್ ಶೇ 8ರಷ್ಟು ಕುಸಿದಿತ್ತು.

ಸಾಮಾನ್ಯವಾಗಿ ಮಾರುಕಟ್ಟೆ ವಹಿವಾಟು ಜುಲೈನಲ್ಲಿ ಹಸಿರು ಗುರುತಿನಲ್ಲಿಯೇ ಸಾಗುತ್ತವೆ. ಆದರೆ, ತಡವಾದ ಮುಂಗಾರು, ಕಾರ್ಪೊರೇಟ್ ಫಲಿತಾಂಶಗಳ ನಿಧಾನಗತಿ, ಆರ್ಥಿಕ ಬೆಳವಣಿಗೆಯ ಹಿನ್ನಡೆ ಮತ್ತು ಇತರೆ ವಿವಿಧ ಅಂಶಗಳು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದ ಫಲವಾಗಿ ಅದು ಈ ಫಲಿತಾಂಶಕ್ಕೆ ಕಾರಣವಾಗಿದೆ.

ದಿನ​ಬ​ಳ​ಕೆಯ ವಸ್ತು​ಗಳ ಮಾರಾಟ ಕುಸಿ​ತ ಮತ್ತು ಆಟೋಮೊಬೈ​ಲ್‌ ಸಾರ್ವ​ಕಾ​ಲಿ​ಕ ಕುಸಿ​ತ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ 37,000 ಅಂಕಗಳ ಗುರಿಯನ್ನು ದಾಟಲಾಗದೆ ಸೆನ್ಸೆಕ್ಸ್, 700 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ.ನಿಫ್ಟಿ ಕೂಡ 10,900ರ ಗಡಿ ತಲುಪಿಲ್ಲ

ಅಮೆರಿಕಾ ಡಾಲರ್ ಮುಂದೆ ತಲೆಬಾಗುತ್ತಿದೆ ರೂಪಾಯಿ!

ಅಮೆರಿಕನ್ ಡಾಲರ್ ಎದುರು ರೂಪಾಯಿ ದರವೂ ಕಳೆದ ಐದು ವಾರಗಳಲ್ಲಿಯೇ ಹೆಚ್ಚಿನ ಕುಸಿತ ಕಂಡಿದೆ.

ಪ್ರತಿಷ್ಠಿತ ಕಂಪನಿ ಮತ್ತು ಬ್ಯಾಂಕ್‌ಗಳ ಷೇರು ಮೌಲ್ಯ ನೆಲ ಕಚ್ಚಿದೆ!

ವೇದಾಂತ, ಎಸ್‌ಬಿಐ ಷೇರುಗಳು ಸೆನ್ಸೆಕ್ಸ್‌ನಲ್ಲಿ ಶೇ 6ರಷ್ಟು ಬಿದ್ದರೆ ಇನ್ನೂ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಲ್‌ ಆಂಡ್ ಟಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಸ್ಟೀಲ್, ಟಿವಿಎಸ್ ಮೋಟಾರ್, ಎಸ್ಕಾರ್ಟ್ಸ್, ಟಾಟಾ ಪವರ್, ಇಂಡಿಯಾ ಬುಲ್ಸ್ ವೆಂಚರ್ಸ್, ಪಿಎನ್‌ಬಿ, ಬಿಎಚ್‌ಇಎಲ್ ಮತ್ತು ಜೆಟ್ ಏರ್‌ವೇಸ್ ಮತ್ತು ಯೆಸ್ ಬ್ಯಾಂಕ್‌ಗಳು ಕೂಡ ದೊಡ್ಡ ಪ್ರಮಾಣದಲ್ಲಿ ಷೇರು ಮೌಲ್ಯ ಕಳೆದುಕೊಂಡಿವೆ ಇನ್ನೂ ಬಿಎಸ್‌ಇಯಲ್ಲಿ 239 ಕಂಪೆನಿಗಳ ಷೇರುಗಳು ಶೇ 10-50ರವರೆಗೂ ನೆಲಕಚ್ಚಿವೆ.

Leave a Reply

Your email address will not be published. Required fields are marked *