ಕಾಲ್ ಕದ್ದಾಲಿಕೆ ಆರೋಪ: ಬಿಜೆಪಿ ಮತ್ತು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು ಎಚ್ಡಿಕೆ!
ನ್ಯೂಸ್ ಕನ್ನಡ ವರದಿ: ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮೂರು ಪಕ್ಷಗಳ ಕೆಲ ಮುಖಂಡರು, ಪತ್ರಕರ್ತರು ಹಾಗೂ ಅಧಿಕಾರಿಗಳು ಸೇರಿ 300 ಜನರ ಫೋನ್ ಟ್ಯಾಪ್ ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ ಬಿಜೆಪಿ, ಕುಮಾರಸ್ವಾಮಿ ಯಿಂದ ಸ್ಪಷ್ಟನೆ.
ಈ ಆರೋಪ ಸಂಬಂಧ ಇಂದು ಜೆಪಿ ನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಇದು ಸತ್ಯಕ್ಕೆ ದೂರವಾದ ಆರೋಪ ಹಾಗೂ ಇನ್ನೂ ಸ್ಪಷ್ಟನೆ ಬೇಕಾದರೆ ತನಿಖೆ ಮಾಡಲಿ ಎಂದು ತಿಳಿಸಿದರು.
ಹೆಚ್ ಡಿ ಕುಮಾರಸ್ವಾಮಿ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ವೇಳೆ ನನ್ನ ಫೋನ್ ಕದ್ದಾಲಿಕೆ ಮಾಡಿದ್ದರು ಎಂಬ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಆರೋಪಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ವಿಶ್ವನಾಥ್ ಅವರ ನಡೆಯನ್ನು ಜನರು ನೋಡಿತ್ತಿದ್ದಾರೆ ಅವರ ಪೋನ್ ಕಾಲ್ ಕದ್ದಾಲಿಕೆ ಮಾಡುವ ಅವಶ್ಯಕತೆ ಇಲ್ಲ ಅವರ ಬಗ್ಗೆ ಮಾತನಾಡಲು ಇಷ್ಟ ಪಡಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.