73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಯಶಸ್ವೀ ರಕ್ತದಾನ ಶಿಬಿರ

73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ M.F.C ಮುಕಚ್ಚೇರಿ ಉಳ್ಳಾಲ ಇದರ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ.

ಉಳ್ಳಾಲ,ಆಗಸ್ಟ್ 15 : ಮುಕ್ಕಚ್ಚೇರಿ ಫ್ರೆಂಡ್ಸ್ ಸರ್ಕಲ್ ಉಳ್ಳಾಲ(M.F.C) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಶ್ರೀನಿವಾಸ ಹಾಸ್ಪಿಟಲ್ ಮುಕ್ಕ ಸಹಬಾಗಿತ್ವದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 15/08/2019 ನೇ ಗುರುವಾರದಂದು ಉಳ್ಳಾಲದ ಮುಕ್ಕಚ್ಚೇರಿಯ ಟಿಪ್ಪು ಸುಲ್ತಾನ್ ಕಾಲೇಜು ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೈಯದ್ ಮದನಿ ದರ್ಗಾ ಉಳ್ಳಾಲ ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಹಾಜಿ ನೆರೆವೇರಿಸಿದರು.

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 27 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಶ್ರೀನಿವಾಸ ಹಾಸ್ಪಿಟಲ್ ಮುಕ್ಕ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ MFC ಇದರ ಉಪಾಧ್ಯಕ್ಷರಾದ ಇಸ್ಮಾಯಿಲ್ ಮುಕ್ಕಚ್ಚೇರಿಯವರನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ HDFC ಬ್ಯಾಂಕ್ ನ ಸರ್ವಿಸ್ ಬ್ರಾಂಚ್ ಮ್ಯಾನೇಜರ್ ರಾಘವೇಂದ್ರ ರಾವ್,ಶ್ರೀ ನಿವಾಸ್ ಮುಕ್ಕ ಆಸ್ಪತ್ರೆಯ ಅಧಿಕಾರಿಯಾದ ಡಾ.ನಿಜಿ ,ಉಳ್ಳಾಲ ನಗರ ಸಭೆ ಸದಸ್ಯರಾದ ಇಬ್ರಾಹಿಂ ಖಲೀಲ್,ಮೊಹಮ್ಮದ್ ಮುಕ್ಕಚೇರಿ ಮತ್ತು ಶ್ರೀಮತಿ ಸ್ವಪ್ನ ಹರೀಶ್,ಸಾಮಾಜಿಕ ಕಾರ್ಯಕರ್ತರಾದ ಶ್ರೀ ಹರೀಶ್,ಟಿಪ್ಪು ಸುಲ್ತಾನ್ ಕಾಲೇಜು ಪ್ರಿನ್ಸಿಪಾಲ್ ಆಗಿರುವ ಅಬ್ದುಲ್ ರಹಿಮಾನ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರಾದ ಶಕೀಲ್ ಉಳ್ಳಾಲ ಹಾಗೂ ಫಾರೂಕ್ ದೇರಳಕಟ್ಟೆ ಮತ್ತು ಸ್ಥಳೀಯರಾದ CAO ಅಬ್ದುಲ್ ಲತೀಫ್ ಉಳ್ಳಾಲ ,ಅಲೀ ಅಕ್ಬರ್ ಉಳ್ಳಾಲ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಅಶ್ರಫ್ ಅರಬಿ ಕಲ್ಲಡ್ಕ ಸ್ವಾಗತಿಸಿ,ಇಮ್ರಾನ್ ಮದಕ ಕಾರ್ಯಕ್ರಮವನ್ನು ನಿರೂಪಿಸಿದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಮುಕ್ಕಚ್ಚೇರಿ ಫ್ರೆಂಡ್ಸ್ ಸರ್ಕಲ್ ಉಳ್ಳಾಲ(M.F.C) ಇದರ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ).

Leave a Reply

Your email address will not be published. Required fields are marked *