ಸಿರಿಯಾದ ಇಂದಿನ ಪರಿಸ್ಥಿತಿಗೆ ಅಧ್ಯಕ್ಷ ಅಸದ್, ರಷ್ಯಾ ಹಾಗೂ ಇರಾನ್ ನೇರ ಹೊಣೆಗಾರರು: ಟ್ರಂಪ್
ನ್ಯೂಸ್ ಕನ್ನಡ ವರದಿ(08-04-2018): ಸಿರಿಯಾದ ಮೇಲೆ ಪದೇ ಪದೇ ಬಾಂಬ್ ದಾಳಿಯಾಗಲು, ರಾಸಾಯನಿಕ ದಾಳಿಯಾಗಲು ಸಿರಿಯಾದ ಅಧ್ಯಕ್ಷ ಬಷಾರುಲ್ ಅಸದ್, ರಷ್ಯಾದ ಅಧ್ಯಕ್ಷ ಪುತಿನ್ ಹಾಗೂ ಇರಾನ್ ಕಾರಣವೆಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಅರೋಪ ಮಾಡಿದ್ದಾರೆ.
ಸಿರಿಯಾದಲ್ಲಿ ಅಸದ್ ನೇತೃತ್ವದ ಸೇನೆಯು ನಡೆಸಿದ ರಾಸಾಯನಿಕ ದಾಳಿಯಲ್ಲಿ ಮಹಿಳೆಯರು ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಹಲವರು ಮೃತರಾಗಿದ್ದಾರೆ. ಅಸದ್ ಎಂಬ ಪ್ರಾಣಿಯ ಜೊತೆ ಸೇರಿರುವ ರಷ್ಯಾ ಹಾಗೂ ಇರಾನ್ ಇದಕ್ಕೆ ನೇರ ಹೊಣೆಗಾರರು. ನೀವು ಇದಕ್ಕೆ ತಕ್ಕ ಬೆಲೆ ತೆರಯಲಿದ್ದೀರಿ ಎಂದು ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾಜಧಾನಿ ದಮಾಸ್ಕಸ್ ಹೊರವಲಯದ ಡೌಮ ನಗರದ ಮೇಲೆ ಬಾಂಬ್ ದಾಳಿ ನಡೆಸಿದ ಅಸದ್ ಸೈನಿಕರು 8 ಮಕ್ಕಳು ಸೇರಿದಂತೆ 40 ಜನರನ್ನು ಕೊಂದಿದ್ದರು. ಇಂದು ಪುನ ರಾಸಾಯನಿಕಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮವಾಗಿ ಸುಮಾರು 70 ಜನರು ಮೃತಪಟ್ಟಿದ್ದರು.