ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಹಿದಾಯತುಲ್ ಇಸ್ಲಾಂ ಟ್ರಸ್ಟ್ (ರಿ) ವತಿಯಿಂದ ಕಾರ್ಕಳದಲ್ಲಿ ಯಶಸ್ವೀ ರಕ್ತದಾನ ಶಿಬಿರ

▪ನಮ್ಮ ದೇಶದ,ಸಮಾಜದ ಒಳಿತಿಗಾಗಿ ನಿಮ್ಮ ಸೇವೆ ಸಲ್ಲಿಸಿ : ಶರೀಫ್ ಸಅದಿ

ಕಾರ್ಕಳ,ಆಗಸ್ಟ್ 25 : ಹಿದಾಯತುಲ್ ಇಸ್ಲಾಂ ಟ್ರಸ್ಟ್ (ರಿ) ಬಂಗ್ಲೆಗುಡ್ಡೆ,ಕಾರ್ಕಳ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ದಿನಾಂಕ 25/08/2019 ನೇ ಭಾನುವಾರದಂದು ಕಾರ್ಕಳದ ಬಂಗ್ಲಗುಡ್ಡೆ ಸಲ್ಮಾನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ,ಕಾರ್ಕಳ ಇದರ ಪ್ರಾಂಶುಪಾಲರಾದ ಬಹು| ಶರೀಫ್ ಸಅದಿ ಕಿಲ್ಲೂರ್ ರವರು ನೆರೆವೇರಿಸಿ ಮಾತನಾಡುತ್ತಾ,”ನಿಮ್ಮ ಸೇವೆ ‌ಕೇವಲ ಪ್ರಚಾರಕ್ಕೆ ಸಿಮಿತವಾಗದೇ ನಮ್ಮ ದೇಶ, ಸಮಾಜ ,ಸಮುದಾಯ ಜಿಲ್ಲೆ ನಮ್ಮ‌ ಪರಿಸರದ‌ ಒಳಿತಾಗಿ ನಿಮ್ಮ ಸೇವೆ ನೀಡುವಂತಾಗ ಬೇಕು ಅಲ್ಲದೆ ನೀವು ನೀಡಿದ ಸೇವೆ ಮತ್ತೊಬ್ಬರಿಗೆ ಲಾಭದಾಯಕವಾಗುವಂತಿರ ಬೇಕು”ಎಂದರು.

ಅದ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ‌ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ “ರಕ್ತದಾನ ಮಾಡುವ ಮೂಲಕ ಒಬ್ಬ ಇನ್ನೊಬ್ಬರ ಪ್ರಾಣ ಉಳಿಸಬಹುದಾಗಿದೆ. ಎಲ್ಲಾ ಪೈಕಿ ರಕ್ತದಾನ ಶೇಷ್ಠವಾಗಿದೆ ಎಲ್ಲರೂ ರಕ್ತದಾನ‌ ಮಾಡಿ” ಎಂದು ಸಲಹೆ ನೀಡಿದರು.

ಮುಸ್ಲಿಂ ಜಮಾತ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ‌‌‌ ಅಶ್ಪಕ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ,”ದೇಶ, ಸಮಾಜದ ಒಳಿತಿಗಾಗಿ ನಾವು ಮಾಡಿದ ಯಾವುದೇ ಕೆಲಸ ಅದು ದೇಶ ರಕ್ಷಣೆ ಮಾಡಿದಷ್ಟೇ ಸಮಾನವಾಗಿರುತ್ತದೆ.ಸಮಾಜದಲ್ಲಿನ ಶೋಷಿತವರ್ಗ‌ ಬಡವರಿಗೆ ನೆರವು, ರೋಗಿಗಳ ಹಾರೈಕೆ, ಬಡ ಹೆಣ್ಣುಮಕ್ಕಳ ಮದುವೆ ಕಾರ್ಯಕ್ರಮ,ಪೊಲೀಸ್ ‌ಇಲಾಖೆಯ ಸಹಕಾರದಿಂದ ಕಾನೂನು‌ಬಾಹಿರ ಚಟುವಟಿಕೆಗಳಲ್ಲಿ ಅಡ್ಡದಾರಿ‌ಹಿಡಿದ ಯುವಕರನ್ನು ಸಮಾಜದ ಸರ್ವತೋಮುಖ ‌ಅಬಿವೃದ್ದಿಗೆ ತರುವಲ್ಲಿ ಪ್ರಯತ್ನ ,ಅರಣ್ಯ‌ಇಲಾಖೆಯ ಜತೆ ಸೇರಿ ನಾಶವಾದ ಮರಗಳ ಜಾಗದಲ್ಲಿ ‌ಗಿಡ ನೆಡುವ ಮೂಲಕ ಹಸಿರು ಕಾರ್ಕಳ ,ತಿಂಗಳಿಗೊಮ್ಮೆ ಸರಕಾರಿ ಆಸ್ಪತ್ರೆ ಗೆ‌‌ ಬೇಟಿ‌ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನ 23 ವಾರ್ಡಗಳಲ್ಲಿ ಸ್ವಚ್ವ ಅಭಿಯಾನ ಮೂಲಕ ಸ್ವಚ್ಚತೆ ನಡೆಸಿ ಸ್ವಚ್ಚ ನಗರವನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ‌ಇಷ್ಟಲ್ಲಾ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಹೊಸ ಮಾದರಿ ಹೊಸತನದ ಕಾರ್ಯಕ್ರಮವನ್ನು ನೀಡಲಿದ್ದೇವೆ”ಎಂದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಯ ಕಾರ್ಯನಿರ್ವಾಹಕ ಅಶ್ರಫ್ ಅರಬಿ ಕಲ್ಲಡ್ಕ ಮಾತನಾಡಿ”ಜವಹರಲಾಲ್ ನೆಹರು ಮೊಟ್ಟಮೊದಲು ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆ ಯಾಗಿದ್ದರು. ಈಗಿನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣ ಎಷ್ಟು ಉಪಯೋಗಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ.ನಾವು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತ ಬಳಗವನ್ನು ‌ಜತೆ ಸೇರಿಸಿ ಇಂತಹ ರಕ್ತದಾನ ಅರಿವು ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೇವೆ.ಮೂರು ಧರ್ಮಗ್ರಂಥಗಳಲ್ಲಿ ಒಬ್ಬ ವ್ಯಕ್ತಿ ‌ಇನ್ನೊಬ್ಬ ವ್ಯಕ್ತಿಗಳ ಜೀವ ಉಳಿಸಬೇಕು ಎಂದು‌ ಸಾರಿದೆ.ಅದಕ್ಕಾಗಿ ನಾವೆಲ್ಲರೂ ಒಂದೇ ಎಂಬ ಬಾವನೆ ಯಿಂದ ರಕ್ತದಾನ ಮಾಡಿ”ಎಂದರು.

ಅಳ್ವಾಸ್ ಆಸ್ಪತ್ರೆಯ ಮ್ಯಾನೆಜ್‌ಮೆಂಟ್‌ ಪ್ರಾಂಶುಪಾಲರಾದ ಆದರ್ಶ ಹೆಗ್ಡೆ ಮಾತನಾಡಿ “ರಕ್ತ ನೀಡಿದ್ದಲ್ಲಿ ಆತನ ಆರೋಗ್ಯ ಉತ್ತಮವಾಗಿರಲು ಸಾದ್ಯ”ಎಂದರು.

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 90 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಹಿದಾಯುತುಲ್ ಇಸ್ಲಾಂ ಟ್ರಸ್ಟ್ ನ ಅದ್ಯಕ್ಷರಾದ ಜನಾಬ್ ಶೇಕ್ ಮುಹಮ್ಮದ್ ಫಾಝಿಲ್,ಕಾರ್ಯದರ್ಶಿ ಹುಸೈನ್ ಬಂಗ್ಲೆಗುಡ್ಡೆ,ಉದ್ಯಮಿ ಜನಾಬ್ ಅಬ್ದುಲ್ ಅಝೀಝ್, ಹಿದಾಯ ಅಲ್ ಜುಬೈಲ್ ನ ಪ್ರಧಾನ ‌ ಕಾರ್ಯದರ್ಶಿ ಜನಾಬ್ ಸಲೀಂ ಉಡುಪಿ, ಕಾರ್ಕಳ ಪುರಸಭೆ ‌ಮಾಜಿ ಅಧ್ಯಕ್ಷರಾದ ಶ್ರೀ ಸುಭೀತ್ ಎನ್.ಆರ್,ಉದ್ಯಮಿ ಜನಾಬ್ ರಜಬ್ ಎ ಕೆ,ವಕೀಲರಾದ ಜನಾಬ್ ರಹ್ಮತ್, ಅಭಿಮತ ಚಾನೆಲ್ ನಿರ್ದೇಶಕರಾದ ಜನಾಬ್ ಅಬೂಬಕ್ಕರ್ ಎ ಕೆ, V4 ವರದಿಗಾರಾದ ಜನಾಬ್ ಖಲೀಲ್ ಅಹ್ಮದ್,ಪತ್ರಕರ್ತರಾದ ಶ್ರೀ ಸಂಪತ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಹಿದಾಯತುಲ್ ಇಸ್ಲಾಂ ಟ್ರಸ್ಟ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ ಪುರಸಭೆಯ ಸ್ಥಾಯೀ ಸಮಿತಿಯ ಮಾಜೀ ಅಧ್ಯಕ್ಷರಾದ ಮೊಹಮ್ಮದ್ ಶರೀಫ್ ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ ವಂದಿಸಿದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ).

Leave a Reply

Your email address will not be published. Required fields are marked *