ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಇದ್ದ ಸುಮಧುರ ಕಂಠದ ರಣು ಮೊಂಡಲ್ ಗೆ ಸಲ್ಲು ಭಾಯಿಯಿಂದ ಬಂಪರ್ ಗಿಫ್ಟ್!
ನ್ಯೂಸ್ ಕನ್ನಡ ವರದಿ (28-8-2019): ಸಾಮಾಜಿಕ ಜಾಲತಾಣಗಳು ಬಂದ ನಂತರ ಜೀವನ ಮೊದಲಿನಂತಿಲ್ಲ. ಒಂದೇ ದಿನದಲ್ಲಿ ಯಾರೂ ಸೂಪರ್ ಸ್ಟಾರ್ ಗಳು ಆಗಬಹುದು. ಹೀಗೆಯೇ ರಾನು ಮೊಂಡಲ್ ಯಶೋಗಾಥೆ ಕೂಡಾ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್ ಸಿನಿಮಾವೊಂದರ ಗಾಯಕಿಯಾಗಿದ್ದಾರೆ, ಜೊತೆಗೆ ಅವರಿಗೆ ಹಲವು ಆಫರ್ ಗಳು ಹರಿದು ಬರುತ್ತಿವೆ.
ನಟ ಸಲ್ಮಾನ್ ಖಾನ್ ಅವರು ರಾನು ಮೊಂಡಲ್ ಅವರಿಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎನ್ನುವ ವರದಿ ಲಭ್ಯವಾಗಿದೆ. ಈ ಮೊದಲು ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ರೈಲ್ವೆ ನಿಲ್ದಾಣದಲ್ಲಿ ಹಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾನು ಅವರು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದರು. ರಾನು ಅವರ ಮೊದಲ ಹಾಡಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎನ್ನುವ ಮಾಹಿತಿ ಕೂಡಾ ಲಭ್ಯವಾಗಿದೆ. ಇದಕ್ಕೆ ಕಾರಣವನ್ನು ತಿಳಿಸಿದ ಹಿಮೇಶ್ ಅವರು ಸಲ್ಲು ತಂದೆ ನನಗೆ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ತಿಳಿಸಿದ್ದರು ಎಂದಿದ್ದರು.