ಮೋದಿ, ಇಮ್ರಾನ್‌ ಖಾನ್‌ ಒಂದೇ ತಾಯಿಯ ಮಕ್ಕಳು: ರಮಾನಾಥ ರೈ

ಮೋದಿ, ಇಮ್ರಾನ್‌ ಖಾನ್‌ ಒಂದೇ ತಾಯಿಯ ಮಕ್ಕಳು: ರಮಾನಾಥ ರೈ

ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಒಂದೇ ಆಗಿದ್ದು, ಒಂದೇ ತಾಯಿಯ ಮಕ್ಕಳ ರೀತಿಯಲ್ಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿ, ಇತ್ತ ಮೋದಿ ಚುನಾವಣೆ ಗೆಲ್ಲಲು ಪಾಕಿಸ್ತಾನವನ್ನು ಬೈದರೆ, ಅತ್ತ ಪಾಕ್ ಪ್ರಧಾನಿ ಇಮ್ರಾನ್‌ ಖಾನ್ ತನ್ನ ದೇಶದಲ್ಲಿ ನಡೆಯುವ ಚುನಾವಣೆ ಸಂದರ್ಭ ಭಾರತವನ್ನು ಹೀಯಾಳಿಸುತ್ತಾರೆ ಎಂದರು. ಚುನಾವಣೆ ಗೆಲುವಿನ ಏಕೈಕ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರಸ್ಪರ ಬೈದಾಡಿಕೊಳ್ಳುತ್ತಾರೆ. ಇವರಿಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ-ಖಾನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವರು ಒಂದೇ ತಾಯಿಯ ಮಕ್ಕಳಿದ್ದಂತೆ. ತಮ್ಮ ಸ್ವಾರ್ಥ ಸಾಧನೆಗಾಗಿ ದೇಶದ ಜನತೆಯನ್ನು ಬಲಿ ಪಡೆಯುತ್ತಿದ್ದಾರೆ. ಇಂಥವರಿಂದ ಅಭಿವೃದ್ಧಿ ಬಯಸುವುದು ಕನಸಿನ ಮಾತಾಗಿದೆ ಎಂದು ರೈ ತಿಳಿಸಿದರು.

Leave a Reply

Your email address will not be published. Required fields are marked *