ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಶಂಸುಲ್ ಉಲಮಾ ಕ್ರಿಯಾ ಸಮಿತಿ ಹಾಗೂ SKSSF ವಿಖಾಯ ಜಂಟಿ ಆಶ್ರಯದಲ್ಲಿ ವಳಚ್ಚಿಲ್ ಪದವಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

▪ರಕ್ತದಾನದಂತಹ ಸಮಾಜ ಸೇವೆಗೆ ಯಾವುದೇ ಜಾತಿ ಧರ್ಮಗಳ ತಡೆಗೋಡೆ ಇರುವುದಿಲ್ಲ : ಬಹು| ಅಬೂಬಕ್ಕರ್ ಸಖಾಫಿ

ಮಂಗಳೂರು,ಸೆಪ್ಟೆಂಬರ್ 08 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಶಂಸುಲ್ ಉಲಮಾ ಕ್ರಿಯಾ ಸಮಿತಿ (ರಿ) ಹಾಗೂ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ವಳಚ್ಚಿಲ್ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಬಾಗಿತ್ವದಲ್ಲಿ ‘ಮರ್ಹೂಂ A.B ಹೈದರ್ ವಳಚ್ಚಿಲ್ ಪದವು’ರವರ ಸ್ಮರಣಾರ್ಥ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ದಿನಾಂಕ 08/09/2019 ನೇ ಭಾನುವಾರದಂದು ವಳಚ್ಚಿಲ್ ಪದವು ಮದ್ರಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ವಳಚ್ಚಿಲ್ ಪದವು ಮಸೀದಿ ಖತೀಬರಾದ ಬಹು| ಅಬೂಬಕ್ಕರ್ ಸಖಾಫಿಯವರ ದುವಾಶೀರ್ವಚನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶಂಸುಲ್ ಉಲಮಾ‌ ಕ್ರಿಯಾ ಸಮಿತಿ ವಳಚ್ಚಿಲ್ ಅಧ್ಯಕ್ಷರಾದ ಜನಾಬ್ ಶಮೀರ್ ಶಾನ್ ರವರ ಅಧ್ಯಕ್ಷತೆಯಲ್ಲಿ ವಳಚ್ಚಿಲ್ ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು| ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಬಹು| ಅಬೂಬಕ್ಕರ್ ಸಖಾಫಿಯವರು,”ರಕ್ತದಾನ ಮಾಡುವುದನ್ನು ಪರಿಶುದ್ಧ ಇಸ್ಲಾಂ ಅನುಮತಿಸಿರುವುದು ಮಾತ್ರವಲ್ಲ,ಅದನ್ನು ಪ್ರೋತ್ಸಾಹಿಸುತ್ತದೆ ಎಂಬುವುದನ್ನು ನಾವು ಧರ್ಮಗ್ರಂಥಗಳಲ್ಲಿ ಕಾಣಬಹದುದು.ಇಂತಹ ಉತ್ತಮ ಕಾರ್ಯಗಳಿಗೆ ಯಾವುದೇ ಜಾತಿ ಧರ್ಮಗಳ ತಡೆಗೋಡೆ ಇರುವುದಿಲ್ಲ” ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ HDFC BANK.ಮಂಗಳೂರು ಶಾಖೆಯ ಡೆಪ್ಯುಟಿ ಮ್ಯಾನೇಜರ್,WBO ಶ್ರೀ ಹರೀಶ.ಎಸ್ ರವರು ಮಾತನಾಡಿ, HDFC ಪರಿವರ್ತನ್ ಎಂಬ ಕಾರ್ಯಕ್ರಮದ ಮೂಲಕ ಕಳೆದ ಹನ್ನೆರಡು ವರ್ಷಗಳಿಂದ ದೇಶದಾದ್ಯಂತ ಈ ವರೆಗೆ ಹದಿನಾರು ಸಾವಿರ ರಕ್ತದಾನ ಶಿಬಿರಗಳಿಗೆ ಸಹಯೋಗವನ್ನು ನೀಡಿದೆ ಎಂದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸಂಘಟಕರಾದ ಇಮ್ರಾನ್ ಅಡ್ಡೂರುರವರು ಸಂಸ್ಥೆಯ ಬಗ್ಗೆ ವಿವರಿಸುತ್ತಾ ಮೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆಯು ಈ ವರೆಗೆ 86 ರಕ್ತದಾನ ಶಿಬಿರಗಳನ್ನು ಆಯೋಜಿಸಿ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಪೊರೈಕೆ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿ ಎಲ್ಲರ ಸಹಕಾರವನ್ನು ಕೋರಿದರು.

 

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 68 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಐವನ್ ಅವಿನಾಶ್ ಡಿ’ಸೋಜ
(ಅದ್ಯಕ್ಷರು, ನಾಗರಿಕ ಕ್ರಿಯಾ ಸಮಿತಿ ವಳಚ್ಚಿಲ್),ಶ್ರೀ ಕಮಲಾಕ್ಷ ಕೊಟ್ಟಾರಿ(ಅದ್ಯಕ್ಷರು, ಶ್ರೀ ನಾಗನಾಗಣಿ ನಾಗಬ್ರಹ್ಮ ಕ್ಷೇತ್ರ ಅರ್ಕುಳ ಮೆರ್ಲಪದವು),ಶ್ರೀ ನವೀನ್ ಡಿ’ಸೋಜ(ಮಾಲಕರು ಮತ್ತು ತರಬೇತುದಾರರು, ಮಸಲ್ ಹಂಟ್ ಜಿಮ್ ವಳಚ್ಚಿಲ್),ಜನಾಬ್ ನಝೀರ್ ವಳಚ್ಚಿಲ್ ಪದವು(ಅಧ್ಯಕ್ಷರು,ಮದ್ರಸ ಮ್ಯಾನೇಜ್ಮೆಂಟ್ ಕಣ್ಣೂರು ರೇಂಜ್),ಜನಾಬ್ A.K ಅಬ್ದುಲ್ ಖಾದರ್ ಕಣ್ಣೂರು
(ಅಧ್ಯಕ್ಷರು,SKSSF ಕಣ್ಣೂರು ಕ್ಲಸ್ಟರ್),ಜನಾಬ್ ಮೊಹಮ್ಮದ್ ಶ್ವಾಲಿಹ್(ಅದ್ಯಕ್ಷರು,SKSSF ವಿಖಾಯ ಮಂಗಳೂರು ವಲಯ),ಜನಾಬ್ ಸಾದಿಕ್ ಸಾಹೇಬ್
(ಮಾಜಿ ಅಧ್ಯಕ್ಷರು,ವಳಚ್ಚಿಲ್ ಪದವು ಮಸೀದಿ ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಮತ್ತು ಶಂಸುಲ್ ಉಲಮಾ ಕ್ರಿಯಾ ಸಮಿತಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಬಿರದ ಅಂಗವಾಗಿ ರಕ್ತದಾನದ ಬಗ್ಗೆ ಮಹಿಳೆಯರಿಗಾಗಿ ಸಮಾಲೋಚನೆ ಹಾಗೂ ಮಾಹಿತಿ ಕೇಂದ್ರವನ್ನು ಹೆಲ್ತ್ ಇನ್ಸ್ಪೆಕ್ಟರ್ ಕು| ಆಯಿಷಾ.ಪಿಯವರು ನಿರ್ವಹಿಸಿದರು.

ಜನಾಬ್ ಜಬ್ಬಾರ್ ಹನೀಫಿಯವರು ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ ವಂದಿಸಿದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ).

Leave a Reply

Your email address will not be published. Required fields are marked *