ರಾಯಲ್ ಚಾಲೆಂಜರ್ಸ್ ವಿರುದ್ಧ ಅತಿವೇಗದಲ್ಲಿ ಅರ್ಧಶತಕ ಸಿಡಿಸಿದ ಸುನಿಲ್ ನರೈನ್!

ನ್ಯೂಸ್ ಕನ್ನಡ ವರದಿ-(08.04.18): ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಪ್ರಾರಂಭಗೊಂಡಿದೆ. ನಿನ್ನೆ ತಾನೇ ಐಪಿಎಲ್ ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಾಟವು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿತ್ತು. ಇದೀಗ ಇಂದು ನಡೆದ ಎರಡನೇ ಪಂದ್ಯಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಮಣಿಸಿತ್ತು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳುರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯಾಟದಲ್ಲಿ ಕೋಲ್ಕತ್ತಾ ತಂಡದ ಆಟಗಾರ ಸುನೀಲ್ ನರೈನ್ ಭರ್ಜರಿ ಪ್ರದರ್ಶನ ತೋರಿದ್ದಾರೆ.

ಕೋಲ್ಕತ್ತಾ ತಂಡದ ಪ್ರಮುಖ ಆಟಗಾರ ಸುನೀಲ್ ನರೈನ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಗಮಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳನ್ನು ಹಿಗ್ಗಾಮುಗ್ಗಾ ರಂಜಿಸಿದರು.. ಕೇವಲ 17 ಎಸೆತಗಳಲ್ಲಿ ಭರ್ಜರಿ ಅರ್ಧಶತಕವನ್ನು ಸಿಡಿಸಿದ ಸುನೀಲ್ ನರೈನ್ ಉಮೇಶ್ ಯಾದವ್ ಎಸೆತಕ್ಕೆ ಬೌಲ್ಡ್ ಆದರು. 5 ಸಿಕ್ಸರ್ ಗಳು ಮತ್ತು ನಾಲ್ಕು ಬೌಂಡರಿಯನ್ನು ಸಿಡಿಸುವ ಮೂಲಕ ಸುನೀಲ್ ನರೈನ್ ಅಭಿಮಾನಿಗಳನ್ನು ದಂಡಿಸಿದರು. ಸದ್ಯ ಕೋಲ್ಕತ್ತಾ ತಂಡವು ಆರ್ಸಿಬಿ ತಂಡದ 177 ರನ್ ಗಳ ಗುರಿಯನ್ನು ಬೆನ್ನಟ್ಟುತ್ತಿದೆ.

Leave a Reply

Your email address will not be published. Required fields are marked *