ಮೈಸೂರು ಪಾಕ್ ನಮ್ಮದು, ಕ್ಯಾತೆ ತೆಗೆದ್ರೆ ಮೈಸೂರು ಪಾಕ್ ತಮಿಳುನಾಡಿಗೆ ಸರಬರಾಜು ಮಾಡಲ್ಲ!: ವಾಟಾಳ್ ನಾಗರಾಜ್
ನ್ಯೂಸ್ ಕನ್ನಡ ವರದಿ ಮೈಸೂರು: ಮೈಸೂರು ಪಾಕ್ ನಮ್ಮದೇ, ನಮ್ಮದೇ, ನಮ್ಮದೇ.. ನೂರಕ್ಕೆ ನೂರರಷ್ಟು ಇದು ನಮ್ಮದೇ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಇಂದು ನಗರದ ರೈಲ್ವೆ ನಿಲ್ದಾಣದ ಬಳಿ ಮೈಸೂರು ಪಾಕ್ನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.
ನೀವೇನಾದ್ರೂ ಮತ್ತೆ ಮೈಸೂರು ಪಾಕ್ ನಮ್ಮದೇ ಅಂದ್ರೆ ಯುದ್ಧ ಮಾಡಬೇಕಾಗುತ್ತದೆ ಎಂದು ತಮಿಳುನಾಡಿಗೆ ವಾಟಾಳ್ ಎಚ್ಚರಿಕೆ ನೀಡಿದ್ದರು. ಈ ರೀತಿ ಕ್ಯಾತೆ ತೆಗೆದ್ರೆ ಮೈಸೂರು ಪಾಕ್ ತಮಿಳುನಾಡಿಗೆ ಸರಬರಾಜು ಮಾಡುವುದಿಲ್ಲ. ತಮಿಳುನಾಡಿನವರೇ ಕಾವೇರಿ, ಮೇಕೆದಾಟು ಬಳಿಕ, ಇದೀಗ ಮೈಸೂರು ಪಾಕ್ಗೆ ಕೈ ಹಾಕಿದ್ದೀರಾ? ಅಂತಾ ವಾಟಾಳ್ ವಾಗ್ದಾಳಿ ನಡೆಸಿದ್ರು.